ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಆರ್ ಎಸ್ ಬಿ ಕೊಂಕಣಿಯಲ್ಲಿ ಚೊಚ್ಚಲ ಸಿನೆಮಾ "ಅಮ್ಚೆ ಸಂಸಾರ್"

ಉಡುಪಿ: ಕೊರೋನಾದ ಸಂಕಷ್ಟದ ಸನ್ನಿವೇಶದಲ್ಲಿ ಬಿಡುವಿನ ವೇಳೆಯನ್ನು ಸದುಪಯೋಗ ಮಾಡುವ ನಿಟ್ಟಿನಲ್ಲಿ ಆರ್ ಎಸ್ ಬಿ ಕೊಂಕಣಿ ಸಮಾಜದ ಉದಯೋನ್ಮುಖ ಕಲಾವಿದರು ಒಟ್ಟಾಗಿ ಚೊಚ್ಚಲ ಸಿನೆಮಾ ನಿರ್ಮಾಣ ಮಾಡಿದ್ದಾರೆ.

ಇವತ್ತು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರತಂಡದ ಸದಸ್ಯರು, ಆರ್‌ಎಸ್‌ಬಿ ಕೊಂಕಣಿ ಭಾಷೆಯಲ್ಲಿ "ಅಮ್ಚೆ ಸಂಸಾರ್" (ನಮ್ಮ ಸಂಸಾರ) ಎಂಬ ನಮ್ಮ ಹಿರಿಯರ ಜೀವನ ಪದ್ಧತಿಯನ್ನು ಆಧರಿಸಿ, 2ಗಂಟೆ 10ನಿಮಿಷದ ಚಲನಚಿತ್ರವನ್ನು ಯಾವುದೇ ಆರ್ಥಿಕ ಸ್ಥಿತಿಯ ಭದ್ರ ಬುನಾದಿ ಇಲ್ಲದೆ ಅಂದಾಜು 25ರಿಂದ 30ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಪೂರ್ಣಗೊಳಿಸಿದ್ದೇವೆ. ನಮ್ಮ ಸಮಾಜದ ಹಿರಿಯರು ದೇವ ದೈವಗಳಲ್ಲಿ ನಂಬಿಕೆ ಇರಿಸಿ ಕಷ್ಟದ ಪರಿಸ್ಥಿತಿಯಲ್ಲೂ ಕೃಷಿಯನ್ನು ಆಧರಿಸಿ, ಆತ್ಮಾಭಿಮಾನಕ್ಕೆ ಕೊರತೆ ಇಲ್ಲದಂತೆ ಸಾತ್ವಿಕ ಕೂಡು ಕುಟುಂಬದ ಜೀವನವನ್ನು ನಡೆಸಿದ್ದಾರೆ. ಅಂದಿನ ಪರಿಸ್ಥಿತಿಯನ್ನು ಚಲನಚಿತ್ರದ ಮೂಲಕ ಅನಾವರಣ ಮಾಡುವ ಹೊಸ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

ಮೂಲತ: ನಮ್ಮ ಸಮಾಜ ಕೂಡು ಕುಟುಂಬದ ಪರಿಕಲ್ಪನೆಯಲ್ಲಿ ಬೆಳೆದು ಬಂದಿದೆ. ಪ್ರಸ್ತುತ ಹಿಂದೆ ಒಂದು ಕೂಡು ಕುಟುಂಬ ಹೇಗಿತ್ತು ಎನ್ನುವುದನ್ನು ಈಗ ಯೋಚಿಸಲೂ ಸಾಧ್ಯವಿಲ್ಲ. ಇತರ ಸಮಾಜದವರು ಸಿನಿಮಾ, ಸಾಹಿತ್ಯ ಕ್ಷೇತ್ರ, ಕಲಾ ಕ್ಷೇತ್ರದಲ್ಲಿ ಒಗ್ಗೂಡಿದ್ದು ನಮ್ಮವರು ಸ್ವಲ್ಪ ಮಟ್ಟಿಗೆ ಹಿಂದಿದ್ದಾರೆ ಎಂಬುದು ನಮ್ಮ ಅಭಿಪ್ರಾಯ. ಈ ಎಲ್ಲವನ್ನೂ ಮನಗಂಡು ನಮ್ಮ ಸಮಾಜದ ಹಿಂದಿನ ಆಚರಣೆ, ಕೃಷಿ ಚಟುವಟಿಕೆ, ದೇವರ ಆರಾಧನೆ, ದೈವಾರಾಧನೆ ಹಾಗೂ ಇತರೆ ವಿಷಯವನ್ನು ವಸ್ತು ರೂಪದಲ್ಲಿಟ್ಟು ನಮ್ಮ ಸಮಾಜದಲ್ಲೂ ಒಂದು ಸಿನಿಮಾ ಆಗಬೇಕು. ಈ ಸಿನಿಮಾ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯಬೇಕು. ಸಮಾಜದ ಕಟ್ಟುಪಾಡುಗಳು ಮತ್ತೆ ಮತ್ತೆ ನಮ್ಮವರಲ್ಲಿ ಮೆಲುಕು ಹಾಕುವಂತಿರಬೇಕೆಂದು ಎಂಬುದು ನಮ್ಮ ಆಶಯವಾಗಿದೆ ಎಂದು ಚಿತ್ರತಂಡದ ಸದಸ್ಯರು ಹೇಳಿದರು.

Edited By : Shivu K
Kshetra Samachara

Kshetra Samachara

20/10/2021 12:44 pm

Cinque Terre

10.38 K

Cinque Terre

0

ಸಂಬಂಧಿತ ಸುದ್ದಿ