ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ‘ವಾಲ್ಕನ್ ಲರ್ನಿಂಗ್ ಕಲೆಕ್ಟಿವ್’ ಉದ್ಘಾಟನೆ

ಮೂಡುಬಿದಿರೆ: ಸಂವಹನ ಎಂಬುವುದು ಉದ್ಯೋಗದ ಅವಿಭಾಜ್ಯ ಅಂಗ. ನಾವು ಸಂವಹನದ ಮೂಲಕ ವಿಷಯವನ್ನು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದಕ್ಕಿಂತ ಅದು ಹೇಗೆ ಪರಿಣಾತ್ಮಕವಾಗಿ ಇನ್ನೊಬ್ಬರಿಗೆ ತಲುಪಿತು ಎಂಬುವುದು ಮುಖ್ಯ ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ 'ವಾಲ್ಕನ್ ಲರ್ನಿಂಗ್ ಕಲೆಕ್ಟಿವ್‘ ಕಂಪನಿ ಹಾಗು ಕಂಪನಿಯ ನೂತನ ಲೋಗೋ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವೃತ್ತಿಯಲ್ಲೂ ಸೋಲು- ಗೆಲುವು ಮುಖ್ಯವಲ್ಲ ಬದಲಾಗಿ ಪರಿಶ್ರಮ ಮುಖ್ಯ, ಸೋಲು ಗೆಲುವಿನಾಚೆಗೂ ಕಲಿಕೆಯ ಪ್ರಕ್ರಿಯೆ ಮುಂದುವರಿಯುತ್ತಿರಬೇಕು ಎಂದರು.

ಕಂಪನಿಯ ನಿರ್ಮಾತೃ ಸಾತ್ವಿಕ್ ಮಾತನಾಡಿ 'ಉದ್ಯೋಗ ಪಡೆಯುವುದು ಕಷ್ಟವಲ್ಲ ಆದರೆ ಉದ್ಯೋಗ ಪಡೆದ ನಂತರ ಆ ಉದ್ಯೋಗದೊಂದಿಗೆ ಅಭಿವೃದ್ಧಿ ಹೊಂದುವುದು ಮುಖ್ಯ, ನಮ್ಮ ಈ ಕಂಪನಿ ಉದ್ಯೋಗಕ್ಕೆ ಬೇಕಾದಂತಹ ಕೌಶಲ್ಯದ ಜತೆಗೆ ಉತ್ತಮ ಸಂವಹನ ಕೌಶಲ್ಯವನ್ನು ಕಲಿಸಿಕೊಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಂಪನಿಯ ನೂತನ ಲೋಗೋ ಮತ್ತು ವೆಬ್ಸೈಟ್‌ನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಆಕಾಶ್ ಮತ್ತು ಮೋನಿಕ ಕಾರ್ಯಕ್ರಮ ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

05/03/2022 05:18 pm

Cinque Terre

7.4 K

Cinque Terre

0

ಸಂಬಂಧಿತ ಸುದ್ದಿ