ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿಯಲ್ಲಿ ಎರಡನೇ ಹಂತದ ಹಡಿಲು ಭೂಮಿ ಕೃಷಿ ಕಾರ್ಯ ನಡೆಯುತ್ತಿದೆ.ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಇದೊಂದು ಅಭಿಯಾನವಾಗಿ ಮಾರ್ಪಟ್ಟಿದ್ದು ಶಾಸಕ ರಘುಪತಿ ಭಟ್ ಇದರ ನೇತೃತ್ವ ವಹಿಸಿದ್ದಾರೆ.
ಶಾಸಕರು ಯುವಜನರನ್ನು ಕೃಷಿಯತ್ತ ಆಕರ್ಷಿಸುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಗದ್ದೆಯಲ್ಲಿ ನೇಜಿ ನೆಟ್ಟರು. ಸ್ಥಳೀಯ ವಿದ್ಯಾರ್ಥಿಗಳು ಕೂಡ ತುಂಬ ಆಸಕ್ತಿಯಿಂದ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ವಿಭಿನ್ನ ಅನುಭವಕ್ಕೆ ತೆರೆದುಕೊಂಡರು.ಉಡುಪಿಯಲ್ಲಿ ಹಡಿಲು( ಬಂಜರು)ಬಿದ್ದ ಭೂಮಿಯಲ್ಲಿ ಭತ್ತ ಕೃಷಿ ಮಾಡಿ ,ಅಕ್ಕಿಯನ್ನು ಕೇದಾರ ಕಜೆ ಎಂಬ ಬ್ರಾಂಡ್ ಮೂಲಕ ಮಾರಾಟ ಮಾಡಲಾಗುತ್ತಿದೆ.
Kshetra Samachara
02/08/2022 07:05 pm