ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಯಾಂತ್ರೀಕೃತ ಭತ್ತ ನಾಟಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಬಂಟ್ವಾಳ: ದಕ್ಷಿಣ ಕನ್ನಡ ಜಿ.ಪಂ. ಬಂಟ್ವಾಳ ಕೃಷಿ ಇಲಾಖೆಯ ಸಹಯೋಗದೊಂದಿಗೆ ಪೊಳಲಿ ದೇವಳದ ಚೆಂಡಿನ ಗದ್ದೆಯಲ್ಲಿ ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯರ ಸಹಕಾರದೊಂದಿಗೆ ಚೆಂಡಿನ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಎಂಒ೪ ಭದ್ರಾ ತಳಿಯನ್ನು ಬಿತ್ತನೆ ಮಾಡಲಾಗಿದೆ. ಯುವಕರು ಭತ್ತದ ಬೇಸಾಯದಲ್ಲಿ ತೊಡಗಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಈ ಕಾರ್ಯ ಮಾಡಲಾಗುತ್ತಿದೆ ಎಂದರು.

ದೇವಳದ ಅರ್ಚಕ ನಾರಾಯಣ ಭಟ್ ಅವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸಕರು ಚಾಲನೆ ನೀಡಿದರು. ಈ ವೇಳೆ ಪೊಳಲಿ ಸಿಎ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್ ನಾವಡ, ನಿರ್ದೇಶಕ ಸುಕೇಶ್ ಚೌಟ, ತಾ.ಪಂ ಮಾಜಿ ಸದಸ್ಯ ಯಶವಂತ ಪೊಳಲಿ, ಕರಿಯಂಗಳ ಗ್ರಾ.ಪಂ. ಮಾಜಿ ಅಧ್ಯಕ್ಷೆ ಚಂದ್ರಾವತಿ ದೇವಾಡಿಗ, ಸದಸ್ಯ ಲೋಕೇಶ್ ಭರಣಿ, ಪಿಲಾತಬೆಟ್ಟು ಗ್ರಾ.ಪಂ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಅಮ್ಮುಂಜೆ ಗ್ರಾ.ಪಂ‌.ಸದಸ್ಯ ಕಾರ್ತಿಕ್ ಬಳ್ಳಾಲ್, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಮನಾಥ ರಾಯಿ, ಪ್ರಮುಖರಾದ ಕಿಶೋರ್ ಪಲ್ಲಿಪಾಡಿ, ಚಂದ್ರಶೇಖರ ಬಡಕಬೈಲು, ಅಶೋಕ್ ಬಡಕಬೈಲು, ಸುಬ್ರಾಯ ಕಾರಂತ, ಶುಭಕರ ಶೆಟ್ಟಿ, ರೋಶನ್ ಪಲ್ಲಿಪಾಡಿ, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ, ಕೃಷಿ ಅಧಿಕಾರಿ ಬಿ.ಬಿ.ಅನಗವಾಡಿ ಮೊದಲಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/08/2022 01:37 pm

Cinque Terre

15.44 K

Cinque Terre

0

ಸಂಬಂಧಿತ ಸುದ್ದಿ