ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಭತ್ತ ಕೃಷಿಕರಿಗೆ ʼಕೂಲಿಯಾಳು ಬರ!; ಬೆಳೆ ಕೈ ತಪ್ಪುವ ಭೀತಿ

ಬಾರಕೂರು: ಕರಾವಳಿಯ ರೈತರಿಗೆ ಒಂದಲ್ಲ ಒಂದು ಸಮಸ್ಯೆ ತಪ್ಪಿದ್ದಲ್ಲ. ಸದ್ಯ ಕೃಷಿ ಕೂಲಿಯಾಳುಗಳ ಸಮಸ್ಯೆ ಈ ಭಾಗದ ಭತ್ತ ಕೃಷಿಕರನ್ನು ಅತಿಯಾಗಿ ಕಾಡುತ್ತಿದೆ. ಹಳೆ ತಲೆಮಾರಿನ‌ ಕೃಷಿಕರು ತಮ್ಮ ಕುಲಕಸುಬನ್ನು ನೆಚ್ಚಿಕೊಂಡು ಕೃಷಿ ಮುಂದುವರೆಸಿದ್ದರೆ, ಹೊಸ ತಲೆಮಾರಿನ ಯುವಜನರು ಭತ್ತದ ಗದ್ದೆ ಕಡೆ ತಲೆ ಹಾಕುತ್ತಲೇ ಇಲ್ಲ.

ಬಾರಕೂರು ಬಳಿಯ ಹನೇಹಳ್ಳಿ, ಬಂಡೀಮಠ, ಕೂರಾಡಿ ಸೇರಿದಂತೆ ಅನೇಕ ಭಾಗಗಳಲ್ಲಿ ಎಕರೆಗಟ್ಟಲೆ ಭತ್ತದ ಕೃಷಿ ಇದೆ. ಈ ಬಾರಿ ಇಲ್ಲಿನ ರೈತರು ಸುಗ್ಗಿ ಬೆಳೆಯನ್ನು ಬೆಳೆಸಿದ್ದಾರೆ. ಒಂದೇ ರೀತಿಯ ಬೀಜಗಳ ಲಭ್ಯತೆ ಇಲ್ಲದ ಕಾರಣ ಸಿಕ್ಕಿದ ಬೀಜಗಳ ಬಿತ್ತನೆ ಮಾಡಿದ ಪರಿಣಾಮವಾಗಿ ನಿಧಾನಗತಿಯ ಬೆಳವಣಿಗೆ ಕಂಡುಬಂದಿದೆ. ಬೆಳೆದ ಬೆಳೆಯನ್ನು ಸೂಕ್ತ ಸಮಯದಲ್ಲಿ ಕಟಾವು ಮಾಡದಿದ್ದಲ್ಲಿ ಕೈಗೆ ಬಂದದ್ದು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿ.

ಇನ್ನು, ಕೃಷಿ ಕೂಲಿಯಾಳುಗಳ ಸಮಸ್ಯೆ ಪರಿಹಾರಕ್ಕೆ ಕಟಾವು ಯಂತ್ರಗಳು ಸಾಕಷ್ಟು ಬಂದಿವೆ. ಆದರೆ, ಅಕ್ಕಪಕ್ಕದ ಗದ್ದೆಗಳಲ್ಲಿ ಕಟಾವಿಗೆ ಬಾರದೇ ಇದ್ದರೆ ಒಂದೇ ಗದ್ದೆಯಲ್ಲಿ ಯಂತ್ರ ಸಂಚರಿಸುವಂತೆ ಇಲ್ಲ. ಕಳೆದ ಬಾರಿ ಸುರಿದ ಅಕಾಲಿಕ ಮಳೆ, ಈ ಭಾಗದ ಕೃಷಿಕರ ನಿದ್ದೆಗೆಡಿಸಿತ್ತು. ಬೆಳೆದ ಪೈರುಗಳು ನೀರಲ್ಲಿ ಹಾಳಾಗಿ ಬೆಳೆ ಕೈಗೆ ಸಿಕ್ಕಿರಲಿಲ್ಲ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಈ ಭಾಗದ ಕೃಷಿಕರಿದ್ದಾರೆ.

Edited By : Shivu K
Kshetra Samachara

Kshetra Samachara

20/03/2022 12:16 pm

Cinque Terre

26.69 K

Cinque Terre

0

ಸಂಬಂಧಿತ ಸುದ್ದಿ