ಮುಲ್ಕಿ: ರಾಜ್ಯಮಟ್ಟದ ಕೃಷಿಮೇಳ ಮುಂದಿನ ಜನವರಿ 14 15 16 ರಂದು ಮುಲ್ಕಿ ಸಮೀಪದ ಕೊಲ್ನಾಡು ಚಂದ್ರಮೌಳೀಶ್ವರ ದೇವಸ್ಥಾನದ ಸಮೀಪ ನಡೆಯಲಿದ್ದು ಯಶಸ್ಸಿಗಾಗಿ ಗ್ರಾಮಸ್ಥರು ಸಹಕರಿಸಬೇಕು ಎಂದು ಕೃಷಿಮೇಳದ ಗೌರವಾಧ್ಯಕ್ಷ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ರಾಜ್ಯಮಟ್ಟದ ಕೃಷಿಮೇಳ ನಡೆಯುವ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಸಮ್ಮೇಳನದ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಕೃಷಿ ಸಚಿವರು ಸಹಿತ ವಿವಿಧ ಇಲಾಖೆಗಳಿಗೆ ಆಮಂತ್ರಣ ನೀಡಲಾಗಿದ್ದು ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ ಎಂದರು. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಹಿಂದಿನ ಕಾಲದ ಕೃಷಿ ಪದ್ಧತಿಗಳನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ ಮೂಲಕ ಕೃಷಿ ಮೇಳ ಯಶಸ್ವಿಯಾಗಲಿ ಎಂದರು.
ಈ ಸಂದರ್ಭ ಪಡುಪಣಂಬೂರು ಗ್ರಾಪಂ ಸದಸ್ಯ ಹರಿಪ್ರಸಾದ್, ಕೃಷಿಮೇಳದ ಸಮಿತಿಯ ಅಧ್ಯಕ್ಷ ವಿಜಯಶೆಟ್ಟಿ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್, ಉಸ್ತುವಾರಿ ಸಮಿತಿಯ ಮುಲ್ಕಿ ಅರಮನೆ ಗೌತಮ್ ಜೈನ್ ಉಪಾಧ್ಯಕ್ಷ ಚಂದ್ರಹಾಸ್ ,ಕೃಷಿ ಅದಿಕಾರಿ ಬಶೀರ್ ಉಪಸ್ಥಿತರಿದ್ದರು.
Kshetra Samachara
19/12/2021 07:53 pm