ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರಿಂದ ಹತ್ತು ಎಕರೆ ಗದ್ದೆಯಲ್ಲಿ ಸುಗ್ಗಿ ನಾಟಿ

ಹೆಬ್ರಿ: ಶಿವಪುರದ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಹಡಿಲು ಭೂಮಿಯಲ್ಲಿ ಸುಗ್ಗಿ ನಾಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದಕ್ಕೆ ಚಾಲನೆ ನೀಡಲಾಯಿತು.ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ .ನವೀನ್ ಭಟ್ ಚಾಲನೆ ನೀಡಿದರು. ಶಿವಪುರದ ಶಿವ ದುರ್ಗೆ ಸಂಜೀವಿನಿ ಸಂಘದ ಮಹಿಳೆಯರು 25 ವರ್ಷಗಳಿಂದ ಹಡಿಲು ಬಿದ್ದ 10 ಎಕ್ರೆ ಕೃಷಿ ಭೂಮಿಯಲ್ಲಿ ಸುಗ್ಗಿ ನಾಟಿ ಮಾಡುವ ಯೋಜನೆ ಹಮ್ಮಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭ ಹೆಬ್ರಿ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಶಶಿಧರ್ ,ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆಂಪೇಗೌಡ ,ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ,ಶಿವಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ,ಕಾರ್ಯದರ್ಶಿ ಅಶೋಕ್ ,ಎನ್ .ಆರ್ .ಎಲ್ .ಎಂ .ಜಿಲ್ಲಾ ಕಾರ್ಯಕ್ರಮ ವ್ಯಸ್ಥಾಪಕ ಪ್ರಭಾಕರ ಆಚಾರ್ ,ಜಿಲ್ಲಾ ವ್ಯವಸ್ಥಾಪಕಿ ನವ್ಯಾ ,ವೈ .ಪಿ .ಜಯಮಾಲಾ ,ಹಡಿಲು ಭೂಮಿ ಕೃಷಿ ನಿರತ ಸಂಜೀವಿನಿ ಸಂಘದ ಅಧ್ಯಕ್ಷೆ ಸುಗಂಧಿ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/12/2021 12:45 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ