ಮುಲ್ಕಿ: ಕಳೆದ ವರ್ಷದ ಕೊರೊನಾ ಸಂಕಷ್ಟದಲ್ಲಿ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ನದಿ ತೀರದ ಪ್ರದೇಶ ಕಬ್ಬು ಬೆಳೆಗಾರರು ಈ ಬಾರಿ ಗಣೇಶೋತ್ಸವಕ್ಕೆ ಮುಂಗಡವಾಗಿ ಭರ್ಜರಿ ವ್ಯಾಪಾರಕ್ಕೆ ಸಜ್ಜಾಗಿದ್ದಾರೆ
ಚೌತಿ ಹಬ್ಬದಲ್ಲಿ ಕಬ್ಬು ಪ್ರಮುಖ ಸ್ಥಾನವನ್ನು ಪಡೆದಿದ್ದು ಚೌತಿ ಹಬ್ಬಕ್ಕೆ ಕಬ್ಬನ್ನು ದ.ಕ, ಉಡುಪಿ ಜಿಲ್ಲೆಗೆ ಬಳ್ಕುಂಜೆಯಿಂದ ಸರಬರಾಜಾಗುತ್ತದೆ,
ಬಳ್ಕುಂಜೆ ನದಿ ತೀರದ ಪ್ರದೇಶದಲ್ಲಿ ಯಥೇಚ್ಛವಾಗಿ
ಕಪ್ಪು ಕಬ್ಬನ್ನು ಬೆಳೆಯಲಾಗುತ್ತಿದ್ದು, ಸ್ವಲ್ಪ ಪ್ರಮಾಣದಲ್ಲಿ ಬಿಳಿಕಬ್ಬನ್ನು ಬೆಳೆಯಲಾಗುತ್ತದೆ.
ಕಳೆದ ಹಲವಾರು ವರ್ಷಗಳಿಂದ ಬಳ್ಕುಂಜೆಯಲ್ಲಿ ಚೌತಿ ಮತ್ತು ಕ್ರೈಸ್ತ ಬಾಂಧವರ ತೆನೆ ಹಬ್ಬಕ್ಕಾಗಿ ರೈತರು ಕಬ್ಬು ಬೆಳೆಯುತ್ತಿದ್ದು ಈ ಬಾರಿಯೂ ಸುಮಾರು ಎರಡು ಲಕ್ಷದಷ್ಟು ಕಬ್ಬು ಬೆಳೆದಿದ್ದಾರೆ.
ಈ ಬಾರಿ ತೆನೆ ಹಬ್ಬ ಮತ್ತು ಚೌತಿ ಹಬ್ಬ ಎರಡು ದಿನಗಳ ಅಂತರದಲ್ಲಿ ಬಂದಿರುದರಿಂದ ಕಬ್ಬಿಗೆ ಸಾಕಷ್ಟು ಬೇಡಿಕೆ ಬಂದಿದೆ, ಬಳ್ಕುಂಜೆಯ ಎಲ್ಲಾ ಕಬ್ಬು ಬೆಳೆಗಾರರು ಒಟ್ಟಾಗಿ ಕಬ್ಬು ಬೆಳೆಗಾರರ ಸಂಘ ರಚಿಸಿದ್ದು,ಈ ಮೂಲಕ ಕಬ್ಬು ಬೆಳೆಗಾರರಿಗೆ ನಷ್ಟ ಆಗುವುದನ್ನು ತಡೆಹಿಡಿಯಲಾಗಿದೆ,
ಕಳೆದ ಬಾರಿ ಕೊರೊನಾ ಕಾರಣದಿಂದ ಯಾವೊಬ್ಬ ಮಾರಾಟಗಾರನು ಖರೀದಿಗೆ ಆಸಕ್ತಿ ವಹಿಸದ ಕಾರಣ ಕೊನೆಯ ಹಂತಕ್ಕೆ 15 ರೂಪಾಯಿಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದರು.
ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹೆಚ್ಚಿನ ಚರ್ಚ್ ಗಳಿಗೆ ಚೌತಿ ಹಬ್ಬಕ್ಕೆ ಬಳ್ಕುಂಜೆ ಕಬ್ಬಿಗೆ ಬೇಡಿಕೆ ಇದ್ದು ಒಟ್ಟಾರೆಯಾಗಿ ಈ ಬಾರಿ ಕಬ್ಬು ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ
Kshetra Samachara
04/09/2021 07:33 pm