ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಬಾಳೆ ಕೃಷಿಯಿಂದ ಬಾಳಿನಲ್ಲಿ ಖುಷಿಯ ಸೆಲೆ; ಬೆಳಾಲು ಗ್ರಾಮದ ಮಹಿಳೆಯರ ಸಾಹಸಗಾಥೆ

ಮಂಗಳೂರು: ಕೃಷಿ ಎಂದರೆ ಹೊಲದಲ್ಲಿ ಹೊತ್ತು ಬಿತ್ತುವ ಕಾಯಕವಷ್ಟೇ ಅಲ್ಲ, ಕೋಳಿ ಸಾಕಣೆಯಿಂದ ಹಿಡಿದು ಹೈನುಗಾರಿಕೆವರೆಗೆ ಎಲ್ಲವೂ ಕೃಷಿಯೊಂದಿಗೆ ಬೆರೆತುಹೋಗಿರುವ ಎಲ್ಲ ಕಾಯಕದಲ್ಲೂ ಕೃಷಿಕ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ.

ಈ ಊರಿನಲ್ಲಿ ಮಹಿಳೆಯರ ತಂಡ ಬಾಳೆತೋಟ ನಿರ್ಮಿಸಿ ಯಶಸ್ಸು ಗಳಿಸಿದ್ದಾರೆ.

ಹೌದು. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರೇ ಈ ಮಾದರಿ ಬಾಳೆತೋಟ ನಿರ್ಮಿಸಿದವರು. ಸಂಘದಲ್ಲಿ ಒಟ್ಟು ಹತ್ತು ಮಂದಿ ಸದಸ್ಯರಿದ್ದು, ಅದರಲ್ಲಿ ಏಳು ಸದಸ್ಯರು ಒಟ್ಟು ಸೇರಿ ಈ ಹಚ್ಚ ಹಸಿರಾಗಿ ಬೆಳೆದು ನಿಂತಿರುವ ಬಾಳೆತೋಟ ನಿರ್ಮಾಣ ಮಾಡಿದ್ದಾರೆ. ಮಧುರಾ ಎಂಬವರು ಈ ಸಂಘದ ಅಧ್ಯಕ್ಷರಾಗಿದ್ದು, ಹರಿಣಾಕ್ಷಿ ಕಾರ್ಯದರ್ಶಿಯಾಗಿದ್ದಾರೆ. ಭವ್ಯಾ, ಯಶೋದಾ, ವನಿತಾ, ಸೀತಾಲಕ್ಷ್ಮೀ ಮತ್ತು ಕಮಲಾ ಸಂಘದ ಸದಸ್ಯರು.

ಈ ಸಂಘ ಪ್ರಾರಂಭ ಮಾಡಿ ಒಂದೂವರೆ ವರ್ಷದಲ್ಲೇ ಬಾಳೆ ತೋಟ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿ, ಯಶಸ್ವಿಯಾಗಿದ್ದಾರೆ. ಈ ಸ್ವಸಹಾಯ ಗುಂಪಿನ ಸದಸ್ಯರಲ್ಲಿ ಒಬ್ಬರಾಗಿರುವ ಕಮಲ ಅವರಿಂದ ವರ್ಷಕ್ಕೆ 20 ಸಾವಿರ ರೂ. ಬಾಡಿಗೆಗೆ ಎರಡೂವರೆ ಎಕ್ರೆ ಜಮೀನನ್ನು ಪ್ರಾರಂಭದಲ್ಲಿ ಲೀಸ್‌ಗೆ ಪಡೆದಿದ್ದಾರೆ. ಜಮೀನನ್ನು ಜೆ.ಸಿ.ಬಿ. ಮೂಲಕ ಸಮತಟ್ಟು ಮಾಡಿ ಬಾಳೆತೋಟ ನಿರ್ಮಾಣದ ಕಾರ್ಯ ಆರಂಭಿಸಿದರು.

ಕಳೆದ ಜನವರಿಯಲ್ಲಿ ಬಾಳೆತೋಟ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು, ಇದೀಗ ತೋಟ ನಳನಳಿಸುತ್ತಿದೆ. ಗೊನೆ ಕಟಾವಿಗೆ ರೆಡಿಯಾಗಿ ಬೆಳೆದು ನಿಂತಿದೆ. ಪಚ್ಚೆ ಬಾಳೆ ಮತ್ತು ನೇಂದ್ರ ಜಾತಿಯ ಬಾಳೆ ಗಿಡ ಬೆಳೆಯಲಾಗಿದೆ. 800 ಪಚ್ಚೆ ಬಾಳೆ ಗಿಡ ಹಾಕಿದರೆ 700 ನೇಂದ್ರ ಜಾತಿಯ ಬಾಳೆಗಿಡ ಬೆಳೆಯಲಾಗಿದೆ. ಒಟ್ಟು 1,500 ಬಾಳೆ ಗಿಡಗಳ ತೋಟ ನಿರ್ಮಿಸಲಾಗಿದೆ. ಈ ಬಾಳೆ ಕೃಷಿಗೆ ಒಂದೂವರೆ ಲಕ್ಷ ಇನ್ವೆಸ್ಟ್‌ಮೆಂಟ್ ಮಾಡಲಾಗಿದೆ. ಇದರಲ್ಲಿ 75 ಸಾವಿರ ರೂ. ಸಾಲವಾಗಿ ಸ್ವಸಹಾಯ ಸಂಘದಿಂದಲೇ ಪಡೆಯಲಾಗಿದೆ. ಉಳಿದ ಹಣ ಸದಸ್ಯರೇ ಒಟ್ಟು ಸೇರಿಸಿ ಬಾಳೆ ಕೃಷಿಗೆ ಹೂಡಿಕೆ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

14/12/2020 07:44 pm

Cinque Terre

24.14 K

Cinque Terre

4

ಸಂಬಂಧಿತ ಸುದ್ದಿ