ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಶಾಲೆಯಲ್ಲಿ ಉಡುಪಿ ಡಿಸಿ ವಾಸ್ತವ್ಯ : ಎಸಿ, ತಹಶೀಲ್ದಾರ್ ಸಾಥ್

ಬ್ರಹ್ಮಾವರ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಅಂಗವಾಗಿ ಜಿಲ್ಲಾಧಿಕಾರಿ ಕೂರ್ಮರಾವ್‌ ಅವರು ಶನಿವಾರ ಚೇರ್ಕಾಡಿಯಲ್ಲಿ ದಿನವಿಡೀ ಕಾಠ್ಯಕ್ರಮ ನಡೆಸಿ ರಾತ್ರಿ ಸರಕಾರಿ ಮಾ.ಹಿ.ಪ್ರಾ. ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಎಸಿ ರಾಜು, ತಹಶೀಲ್ದಾರ್ ಅವರ ಮತ್ತಿತರರು ಜತೆಗಿದ್ದರು.

ಬೆಳಗ್ಗೆ ಚೇರ್ಕಾಡಿ ಯುವಕ ಮಂಡಲದ ವಠಾರದಲ್ಲಿ ವಿವಿಧ ಸವಲತ್ತು ವಿತರಣೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಜರಗಿತು. ಸಂಜೆ ಮರಾಠಿ ಕಾಲನಿ ಹಾಗೂ ಅನ್ನಪೂರ್ಣ ನರ್ಸರಿಗೆ ಭೇಟಿ ನೀಡಿದರು. ಪಂಚಾಯತ್ ಅಧ್ಯಕ್ಷೆ ರೇಖಾ ಭಟ್, ಪಿಡಿಒ, ಗ್ರಾಮ ಲೆಕ್ಕಿಗರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಸಂಜೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರಕ್ರಮ ಜರಗಿತು. ಮಕ್ಕಳೊಂದಿಗೆ ಡಿಸಿ ಸಂವಾದ ನಡೆಸಿದರು.

Edited By : PublicNext Desk
Kshetra Samachara

Kshetra Samachara

20/06/2022 09:25 am

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ