ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರ್ಕಳ: ರಾಷ್ಡ್ರೀಯ ಹೆದ್ದಾರಿ ಕಾಮಗಾರಿಗೆ ಅಡ್ಡಿ: ಪೊಲೀಸರು ಸ್ಥಳಕ್ಕೆ

ಪರ್ಕಳ: ಮಣಿಪಾಲ ಸಮೀಪದ ಕೆಳಪರ್ಕಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವರು ಅಡ್ಡಿಪಡಿಸಿದ ಘಟನೆ ನಡೆದಿದೆ. ಕಾಮಗಾರಿ ನಡೆಯುತ್ತಿದ್ದಾಗ ಎರಡು ಮೂರು ವಾಹನಗಳಲ್ಲಿ ಆಗಮಿಸಿದ ನಾಲ್ಕೈದು ಮಂದಿ ತಮ್ಮ ಜಾಗದಲ್ಲಿ ಕಾಮಗಾರಿ ನಡೆಸದಂತೆ ತಗಾದೆ ತೆಗೆದಿದ್ದಾರೆ.

ಕಾಮಗಾರಿಯ ವಾಹನಗಳು ಆಚೀಚೆ ಓಡಾಡದಂತೆ ದಾರಿಗೆ ಕಾರುಗಳನ್ನು ಅಡ್ಡವಾಗಿ ನಿಲ್ಲಿಸಿದ್ದಾರೆ. ಇದರಿಂದ ಮೂರು ಗಂಟೆಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಳಿಕ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಮಾಹಿತಿ ತಿಳಿದು ತತ್‌ಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೆಲಸಕ್ಕೆ ಅಡ್ಡಿಪಡಿಸಿದವರೊಂದಿಗೆ ಮಾತುಕತೆ ನಡೆಸಿ ಕಾಮಗಾರಿಗೆ ಅಡಚಣೆ ಮಾಡದಂತೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

15/05/2022 09:15 am

Cinque Terre

9.82 K

Cinque Terre

0

ಸಂಬಂಧಿತ ಸುದ್ದಿ