ಉಡುಪಿ: ಉಡುಪಿಯ ಫಿಶ್ ಕ್ಯಾಂಪಸ್ ಹೊಟೇಲ್ ನ ಸಭಾ ಭವನದಲ್ಲಿ ಇಂದು ಕರ್ನಾಟಕ ಕ್ಷತ್ರೀಯ ಮರಾಠ ಮಹಾ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯು ರಾಜ್ಯ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕ್ ವಾಡ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಮರಾಠ ಸಮಾಜವನ್ನು 3B ಯಿಂದ 2A ಗೆ ಸೇರಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಲು ಒಕ್ಕೂಟದ ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು.
ಹುಬ್ಬಳ್ಳಿ ಅಥವಾ ವಿಜಯಪುರದಲ್ಲಿ ಕ್ಷತ್ರೀಯ ಮರಾಠ ಸಮಾಜದ ಬೃಹತ್ ಸಮಾವೇಶವನ್ನು ಏರ್ಪಡಿಸುವುದು ಹಾಗೂ ಗಡಿ ಭಾಗ ನಿಪ್ಪಾಣಿಯಿಂದ ಬೆಳಗಾವಿ ಮುಖಾಂತರ ಹಳಿಯಾಳ, ಧಾರವಾಡ ಹಾವೇರಿ, ಗದಗ ಮೂಲಕ ಹುಬ್ಬಳ್ಳಿಯ ವರೆಗೆ ಸಮಾಜದ ಜಾಗೃತಿಗಾಗಿ ಶಿವಜ್ಯೋತಿಯನ್ನು ಮೆರವಣಿಗೆಯ ಮುಖಾಂತರ ಬರಮಾಡಿಕೊಳ್ಳುವುದು ಹಾಗೂ ಸಮಾಜದ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುವುದು ಮತ್ತು ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸುವುದರ ಕುರಿತು ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.
Kshetra Samachara
22/02/2021 12:19 pm