ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಪಣಿಯೂರು ಕ್ರಾಸ್ ಬಳಿ ಮತ್ತೆ ಮೀನು ಮಾರಾಟ; ಸುಗಮ ಸಂಚಾರಕ್ಕೆ ಸಂಚಕಾರ

ಕಾಪು: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ರಾ.ಹೆ. 66ರ ಉಚ್ಚಿಲ-ಪಣಿಯೂರು ರಸ್ತೆ ಪಕ್ಕದಲ್ಲಿ ಮೀನು ಮಾರಾಟದಿಂದಾಗಿ, ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಕಿರಿದಾದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಕಾರಣ ಹಲವು ಸಮಸ್ಯೆ ಎದುರಾಗಿದೆ. ಮೀನಿನ ಮಲಿನ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆಯ ಪಕ್ಕದಲ್ಲಿ ಹರಿಯ ಬಿಟ್ಟು ಪರಿಸರ ಗಲೀಜು ಆಗುತ್ತಿರುವುದಲ್ಲದೆ, ಸುತ್ತಮುತ್ತ ದುರ್ವಾಸನೆ ಬೀರುತ್ತಾ ಸ್ಥಳೀಯರಿಗೆ ತಲೆ ನೋವಾಗಿ ಪರಿಣಮಿಸಿದೆ.

ಇಲ್ಲಿಗೆ ಮೀನು ಕೊಳ್ಳಲು ಬಂದ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ಟ್ರಾಫಿಕ್‌ ಜಾಮ್‌ ಮಾಡುತ್ತಿದ್ದಾರೆ. ಒಂದೊಮ್ಮೆ ಜನರು ಕಿಕ್ಕಿರಿದು ಸೇರಿದರೆ ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ಇದರಿಂದಾಗಿ ವಾಹನ ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಉದಾಹರಣೆಗಳೂ ಇವೆ. ಅಲ್ಲದೆ, ಮೀನಿನ ತ್ಯಾಜ್ಯ ತಿನ್ನಲು ಬೀದಿ ನಾಯಿಗಳ ಹಿಂಡು ಇಲ್ಲೇ ಓಡಾಡುತ್ತಿರುತ್ತವೆ.

ಇಲ್ಲಿನ ಸಮಸ್ಯೆ ಬಗ್ಗೆ ಗ್ರಾಪಂ ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಮೀನು ಮಾರಾಟ ನಡೆಸುತ್ತಿದ್ದು, ಸಮಸ್ಯೆ ಉಂಟಾದಾಗ ಪೊಲೀಸರು ಆ ಜಾಗದಿಂದ ತೆರವುಗೊಳಿಸಿದ್ದರು.ಆದರೆ, ಇದೀಗ ಕೆಲವರು ಅದೇ ಸ್ಥಳದಲ್ಲಿ ಮೀನು ಮಾರಾಟದಲ್ಲಿ ತೊಡಗಿದ್ದು,ಇನ್ನು ಕೆಲವರು ಪೇಟೆ ಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿರುವ ಸ್ಥಳೀಯರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

17/01/2021 09:29 am

Cinque Terre

6.72 K

Cinque Terre

0

ಸಂಬಂಧಿತ ಸುದ್ದಿ