ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಪುರಸಭೆ ಕರ್ಮಕಾಂಡ : ಸರ್ಕಾರಕ್ಕೆ ನ್ಯಾಯ ಸಾಮಾನ್ಯ ಜನತೆಗೆ ಅನ್ಯಾಯ

ವರದಿ : ಸಂಪತ್ ನಾಯಕ್ ಕಾರ್ಕಳ

ಕಾರ್ಕಳ : ಕಾರ್ಕಳ ಪುರಸಭೆಯ ಒಂಬತ್ತು ವಾಹನ ಗಳಿಗೆ ವಾಹನ ಫಿಟ್ನೆಸ್ ಪ್ರಮಾಣ ಪತ್ರ ಹಾಗೂ ವಿಮೆ ಇಲ್ಲದೇ ಅದೆಷ್ಟೋ ವರ್ಷಗಳು ಕಳೆದಿದೆ.

ಹೌದು ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಒಟ್ಟು ಒಂಬತ್ತು ಸರ್ಕಾರಿ ವಾಹನಗಳಿಗೆ ವಿಮೆ ವಾಹನ ಫಿಟ್ನೆಸ್ ಪ್ರಮಾಣಪತ್ರ ,ಹಾಗೂ ಹೊಗೆ ತಪಾಸಣೆ ಇಲ್ಲದೆ ಐದು ವರ್ಷಗಳೇ ಕಳೆದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಮುಖ್ಯಾಧಿಕಾರಿಗಳು ಈ ಬಗ್ಗೆ ತಲೆ ಕಡೆಸಿಕೊಂಡಿಲ್ಲ.

ಈ ಒಂಬತ್ತು ವಾಹನಗಳು ದಿನಂಪ್ರತಿ ರಸ್ತೆಯಲ್ಲಿ ರಾಜರೋಷವಾಗಿ ಸಂಚಾರ ನಡೆಸುತ್ತಿದ್ದರೂ ಆರ್ ಟಿ ಓ ಅಧಿಕಾರಿಗಳಾಲಿ, ಪೊಲೀಸ್ ಅಧಿಕಾರಿಗಳ ಮಾತ್ರ ಈ ವಾಹನವನ್ನು ತಪಾಸಣೆ ಮಾಡದೇ ಇರುವುದು ದುರಂತ.

ಇಂತಹ ಆಕ್ರಮ ಕಾನೂನು ಬಾಹಿರಾಗಿ ಓಡಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡುವಲ್ಲಿ ದಂಡ ವಿಧಿಸುವಲ್ಲಿ ಆರ್ ಟಿ ಓ ಅಧಿಕಾರಿಗಳು ಹಿಂದೇಟು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೋಟಾರ್ ಕಾಯ್ದೆ 1989 ರ ಪ್ರಕಾರ, ವಾಹನವು ಅದರ ಹೆಸರಿಗೆ ಮಾನ್ಯ ವಾಹನ ಫಿಟ್ ನೆಸ್ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ವಾಹನದ ನೋಂದಣಿಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ.

ವಾಹನಗಳಿಗೆ ಫಿಟ್ ನೆಸ್ ನ ಪ್ರಮಾಣಪತ್ರವು ಸರ್ಕಾರವು ಹೊರಡಿಸಿದ ದಾಖಲೆಯಾಗಿದ್ದು, ವಾಹನದ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ವಾಹನಗಳನ್ನು ರಸ್ತೆಗಳಲ್ಲಿ ಓಡಿಸಲು ಯೋಗ್ಯವಾಗಿದೆ ಎಂದು ಹೇಳುತ್ತದೆ.

ಕಾನೂನಿನ ಪ್ರಕಾರ, ವಾಣಿಜ್ಯ ವಾಹನಗಳಿಗೆ ಮತ್ತು ಖಾಸಗಿ ವಾಹನಗಳಿಗೆ ಫಿಟ್ ನೆಸ್ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಇದ್ಯಾವುದೂ ಇಲ್ಲದೇ ಕಾನೂನು ಬಾಹಿರವಾಗಿ ವಾಹನಗಳು ಕಳೆದ ಐದಾರು ವರ್ಷಗಳಿಂದ ಸಂಚಾರ ನಡೆಸುತ್ತಿದ್ದರೂ ಆರ್ ಟಿಒ ಹಾಗೂ ಪೊಲೀಸ್ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿರುವ ಸಂಶಯಕ್ಕೆ ಕಾರಣವಾಗಿದೆ.

ಜನಸಾಮಾನ್ಯರಿಗೆ ಹೆಲ್ಮೆಟ್ ಮಾಸ್ಕ ವಿಚಾರಕ್ಕೆ ದಂಡ ವಿಧಿಸಿದ ಸರ್ಕಾರ ಮಲತಾಯಿ ದೋರಣೆ ನಡೆಸುತ್ತಿರುವುದು ಸರಿಯೇ..?

ವಾಹನ ಫಿಟ್ ನೆಸ್ ಪ್ರಮಾಣಪತ್ರ ,ವಿಮೆ ಹಾಗೂ ವಾಯುಮಾಲಿನ್ಯ ದಾಖಲೆಗಳು ಇಲ್ಲದೇ ಸಾರಿಗೆ ಇಲಾಖೆಯ ಬೊಕ್ಕಸಕ್ಕೆ ಲಕ್ಷಗಟ್ಟಲೆ ನಷ್ಟ ಉಂಟುಮಾಡಿದ ಅಧಿಕಾರಿಗಳ ಹಾಗೂ ಮುಖ್ಯಾಧಿಕಾರಿ ವಿರುದ್ದ ಪ್ರಕರಣ ದಾಖಲಿಸಿ ಅವರ ವೇತನದಿಂದ ಪಾವತಿಸುವಂತೆ ಪುರಸಭೆ ಸದಸ್ಯ ಸೋಮನಾಥ ನಾಯ್ಕ್ ಆರ್ ಟಿ ಓ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ವಾಹನ ವಿಮೆ ಇಲ್ಲದೇ ರಸ್ತೆಯಲ್ಲಿ ಸಂಚಾರ ಮಾಡುದು ಅಪರಾಧ ಹೆಲ್ಮೆಟ್, ಮಾಸ್ಕ ಧರಿಸಿಲ್ಲ ಎಂದು ದಂಡ ವಸೂಲಿ ಮಾಡುವ ಅಧಿಕಾರಿಗಳ ಯಾಕೆ ಕ್ರಮ ವಹಿಸಿಲ್ಲ? ಕಾರ್ಕಳ ಪುರಸಭೆ ಭ್ರಷ್ಟಾಚಾರ ದಿಂದ ಮುಳುಗಿಹೋಗಿದೆ. ಅಧಿಕಾರಿ ವೇತನದಿಂದಲೇ ಈ ದಂಡವನ್ನು ಪಾವತಿಸಿಬೇಕು.

ಈ ವಾಹನಗಳು ದಿನಂಪ್ರತಿ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ. ಒಂದು ವೇಳೆ ಈ ವಾಹನ ಅಪಘಾತ ಸಂಭವಿಸಿ ಜೀವ ಹಾನಿಯಾದ್ದಲ್ಲಿ ಯಾರು ಹೊಣೆ? ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ.

ಪುರಸಭೆ ಅಧಿಕಾರ ಗಳಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದೇವು ಕಳೆದು ಒಂದು ವಾರದ ಹಿಂದೆ ವಾಹನ ತಪಾಸಣೆ ನಡೆಸುವ ವೇಳೆ ಪುರಸಭೆ ವಾಹನವನ್ನು ತಡೆದು ನಿಲ್ಲಿಸಲಾಗಿತ್ತು ಈ ವೇಳೆ ಅಧಿಕಾರಿಗಳು ಬಂದು ಸಾರ್ವಜನಿಕ ಸೇವೆಗೆ ತೊಂದರೆಯಾಗುತ್ತೆ ಕೂಡಲೇ ಸರಿಪಡಿಸುವುದಾಗಿ ತಿಳಿಸಿದ್ದು ಅದರಂತೆ ಕಳುಹಿಸಿದ್ದೇವು ಅದರೆ ಈವರೆಗೆ ಯಾವುದೇ ದಾಖಲೆಗಳನ್ನು ಸರಿಪಡಿಸದೇ ಇರುವುದು ಕಂಡು ಬಂದಿದೆ.ಮುಂದಿನ ದಿನಗಳಲ್ಲಿ ದಂಡ ವಿಧಿಸಲಿದ್ದೇವೆ

Edited By : Nirmala Aralikatti
Kshetra Samachara

Kshetra Samachara

15/12/2020 04:13 pm

Cinque Terre

6.19 K

Cinque Terre

2

ಸಂಬಂಧಿತ ಸುದ್ದಿ