ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿಯಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ

ಮಣಿಪಾಲ: ಸೆಪ್ಟೆಂಬರ್ 29 ಅನ್ನು ಪ್ರತಿ ವರ್ಷ ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಇದು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ ಅರ್ಧದಷ್ಟಿದೆ. ವಿಶ್ವ ಹೃದಯ ದಿನದ 2022 ರ ಘೋಷ ವಾಕ್ಯ "ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ". ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ , ಹೃದಯರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹೃದಯದ ಆರೋಗ್ಯದ ಅರಿವು ಮೂಡಿಸಲು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ ಮತ್ತು ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶ್ರೀ ಅಬ್ದುಲ್ ಅಹದ್ ಐಪಿಎಸ್, ಪೊಲೀಸ್ ಅಧೀಕ್ಷಕರು- ಕರಾವಳಿ ಭದ್ರತಾ ಪೊಲೀಸ್, ಕರ್ನಾಟಕ ಇವರು ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಅನಾವರಣಗೊಳಿಸಿದರು ಮತ್ತು ಅವರು ಮಾತನಾಡುತ್ತಾ "ನಮ್ಮನ್ನು ಅವಲಂಬಿತರಾಗಿ ಬಹಳಷ್ಟು ಜನ ನಮ್ಮ ಕುಟುಂಬದಲ್ಲಿ ಇರುತ್ತಾರೆ .ಅಕಾಲಿಕ ಮರಣ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ ನಮ್ಮ ಹೃದಯ ತಪಾಸಣೆ ಮಾಡುವುದರ ಮೂಲಕ ನಮ್ಮ ಹೃದಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು" ಎಂದರು.

ಡಾ ಶರತ್ ಕುಮಾರ್ ರಾವ್, ಡೀನ್-ಕೆಎಂಸಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜುಗಳನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ,ಹೃದಯವು ವ್ಯಕ್ತಿ ಜೀವಂತವಾಗಿರಲು ಒಂದು ಯಂತ್ರದ ತರಹ ಕೆಲಸ ಮಾಡುತ್ತದೆ ಮತ್ತು ಇದು ದೇಹದ ಎಲ್ಲ ಜೀವಕೋಶಗಳಿಗೆ ರಕ್ತ , ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವುದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತದೆ. ಇಂತಹ ಬಹು ಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದರು..

ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಮಲ್ಪೆ ಭದ್ರತಾ ಪೊಲೀಸ್ ನಿರೀಕ್ಷಕ ಡಾ ಶಂಕರ್ ಎಸ್ ಕೆ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/09/2022 02:50 pm

Cinque Terre

4.27 K

Cinque Terre

0

ಸಂಬಂಧಿತ ಸುದ್ದಿ