ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಮೂಲದ ಗೌರಿ ಎಂಬಾಕೆ
ಮಣಿಪಾಲದ ಆಸ್ಪತ್ರೆಯಲ್ಲಿ ಆಯುಷ್ಮಾನ್ ಸೌಲಭ್ಯಕ್ಕೆ ಪರದಾಡುತ್ತಿದ್ದ ಬಡ ದಲಿತ ರೋಗಿಯ ನೋವಿಗೆ, ಮಾಧ್ಯಮದ ಮಾಹಿತಿ ಮೇರೆಗೆ, ತಕ್ಷಣ ಡಾ ಗಡಾದ್ , ಮಣಿಪಾಲ ಆಸ್ಪತ್ರೆ ಮಂಡಳಿಗೆ ಕರೆ ಮಾಡಿ, ಕೂಡಲೇ ಆಯುಷ್ಮಾನ್ ಜಾರಿಯಾಗುವಂತೆ ಮಾಡಿ, ರೋಗಿಯ ಸಂಕಷ್ಟಕ್ಕೆ ಮನಮಿಡಿದಿದ್ದಾರೆ.
3 ಎ ರೆಫರಲ್ ನಲ್ಲಿ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಆಯುಷ್ಮಾನ್ ನಲ್ಲಿ ಒಪ್ಪಿಗೆ ಸಿಕ್ಕಿದರೂ ಕೂಡಾ, ತಮ್ಮದೇ ಕೋಡ್ ಮ್ಯಾಚಿಂಗ್ ಆಗಬೇಕು ಎನ್ನುವ ಮಣಿಪಾಲ ಆಸ್ಪತ್ರೆಯ ಕಣ್ಣು ಮುಚ್ಚಾಲೆ ಆಟ, ಬಹಳಷ್ಟು ರೋಗಿಗಳ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯ ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆಯ ಬಡವರ ರೋಗಿಗಳ ಪಾಲಿನ ದಕ್ಷ ಆರೋಗ್ಯ ಅಧಿಕಾರಿಗೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Kshetra Samachara
05/12/2024 05:37 pm