ಉಡುಪಿ: ಜಿಲ್ಲಾ ಪಂಚಾಯತ್ ಉಡುಪಿ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ , ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಜಂಟಿ ಆಶ್ರಯದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ 2022 "ಭರವಸೆಯೊಂದಿಗೆ ಸಂಪರ್ಕ " ಎಂಬ ಘೋಷವಾಕ್ಯ ಮೂಲಕ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾದ ಡಾ. ನಾಗಭೂಷಣ್ ಉಡುಪ , ಜಿಲ್ಲಾ ಆರೋಗ್ಯಧಿಕಾರಿ ಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಕಿಜೋಫ್ರೇನಿಯಾದ ಕುರಿತಾಗಿ ಸಮಾಜದಲ್ಲಿ ಇರುವ ಕಳಂಕವನ್ನು ದೂರಮಾಡಿ ರೋಗಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವುದರ ಮಹತ್ವವನ್ನು ಕುರಿತು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಚಿದಾನಂದ ಸಂಜು ಜಿಲ್ಲಾ ಮಾನಸಿಕ ಕಾರ್ಯಕ್ರಮ ಆಧಿಕಾರಿಯವರು ಸ್ಕಿಜೋಫ್ರೇನಿಯಾದ ಕುರಿತಾಗಿ ಜನಜಾಗೃತಿ ಕಾರ್ಯಕ್ರಮದ ಉಪಯೋಗಗಳನ್ನು ವಿವರಿಸಿದರು.ಸ್ಕಿಜೋಫ್ರೇನಿಯಾ ದೈಹಿಕ ಕಾಯಿಲೆಗಳಂತೆ ರಕ್ತಪರೀಕ್ಷೆ ಗಳಿಂದಾಗಲಿ ಅಥವಾ ಸ್ಕ್ಯಾನಿಂಗ್ ಗಳಿಂದಾಗಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ಇದನ್ನು ಸೂಕ್ತ ಮಾನಸಿಕ ಸ್ಥಿತಿ ಪರೀಕ್ಷೆಗಳ ಮೂಲಕ ಮಾತ್ರ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು. ಸ್ಕಿಜೋಫ್ರೇನಿಯಾ ಬ್ರೈನ್ ಕ್ಯಾನ್ಸರ್ ಎಂಬುದು ಅತ್ಯಂತ ದೊಡ್ಡ ಮಿಥ್ಯ! ದೈಹಿಕ ಕಾಯಿಲೆಯಂತೆಯೇ ಮಾನಸಿಕ ಕಾಯಿಲೆಯ ಚಿಕಿತ್ಸೆಯ ಮೂಲಕ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ. ಪಿ ವಿ ಭಂಡಾರಿ ಹೇಳಿದರು. ಡಾ.ವಾಸುದೇವ್ ಮನೋವೈದ್ಯರು ಜಿಲ್ಲಾ ಆಸ್ಪತ್ರೆ, ಉಡುಪಿ, ಡಾ.ಮನು ಅನಂದ ಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಪ್ರಾಸ್ಥಾವಿಕ ಮಾತಗಳ ಮೂಲಕ ನೆರೆದ ಗಣ್ಯರನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ದೀಪಶ್ರೀ ಮತ್ತು ಕುಮಾರಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಪದ್ಮಾ ವಂದನೆಯನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ನರ್ಸಿಂಗ್ ಹಾಗೂ ಮನೋವಿಜ್ಞಾನದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿಯನ್ನು ಹಮ್ಮಿಕೊಳ್ಳಲಾಯಿತು.
Kshetra Samachara
24/05/2022 05:09 pm