ಕಾರ್ಕಳ : ಕಾರ್ಕಳ ರೋಟರಿ ಬಾಲ ಭವನದಲ್ಲಿ ಕ್ಯಾನ್ಸರ್ ಪೀಡಿತರ ಮುಖದಲ್ಲಿ ಭರವಸೆಯ ನಗು ತರುವ ಉದ್ದೇಶದಿಂದ ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಯುವವಾಹಿನಿ ಘಟಕ ಕಾರ್ಕಳ ಮತ್ತು ಮಹಿಳಾ ಸೌಂದರ್ಯ ಸಂಘ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ seeds of hope muliya fondestion ಪುತ್ತೂರು ಇವರ ಮಾರ್ಗದರ್ಶನದಲ್ಲಿ ಕೇಶದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಜ್ಞಾನೇಶ್ ಕಾಮತ್ ದಂಪತಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜನರಿಗೆ ಕೇಶ ದಾನದ ಬಗ್ಗೆ ಅರಿವು ಮೂಡಿಸಿವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಳಿಯ ಫೌಂಡೇಶನ್ ಇವರ ವತಿಯಿಂದ ಕ್ಯಾನ್ಸರ್ ಪೀಡಿತ ಮಹಿಳೆಗೆ ಉಚಿತ ವಿಗ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀಮತಿ ಕೃಷ್ಣ ವೇಣಿ ಪ್ರಸಾದ್ ಮುಳಿಯ ಇವರು ಮಾತನಾಡಿ, ದಾನ ಮಾಡುವಾಗ ನನಗೆ ಉಳಿಸಿ ಪರರಿಗೆ ದಾನವನ್ನು ಮಾಡುವುದಕ್ಕೂ, ನನಗೆ ಇಲ್ಲದಿದ್ದರೂ ಪರವಾಗಿಲ್ಲ ಉಳಿದವರಿಗೆ ಉಪಕಾರವಾಗಲಿ ಎಂಬ ಉದ್ದೇಶದಿಂದ ದಾನ ಮಾಡುವುದು ದೇವರು ಮೆಚ್ಚುವಂತದ್ದು ಎಂದು ತಿಳಿಸಿದರು.
ಒಂದು ವ್ಯಕ್ತಿಗೆ ವಿಗ್ ಮಾಡಲು 5 ಜನರ ಕೇಶವು ಬೇಕಾಗುತ್ತದೆ,ಹಾಗಾಗಿ ಇಂತಹ ಕೇಶದಾನ ಕಾರ್ಯಕ್ರಮ ಮಾಡಿದಲ್ಲಿ ಉಚಿತವಾಗಿ ಬಡ ಮಕ್ಕಳಿಗೆ, ಬಡ ಕುಟುಂಬದ ಕ್ಯಾನ್ಸರ್ ಪೀಡಿತರಿಗೆ ವಿಗ್ ನ್ನು ನೀಡಬಹುದು ಎಂದು ಮನಗಂಡು ಒಟ್ಟು 9 ಜನರು ಸೇರಿ ಮಾಡಿದ ತಂಡ ಎಂದು Seeds of hope ತಂಡದ ಸದಸ್ಯೆ ಕು. ಆದ್ಯ ಸುಲೋಚನಾ ತಿಳಿಸಿದರು.ಕುಮಾರಿ ಹಿತ ಕಜೆ ಮತ್ತು ಸ್ನೇಹ ಭಟ್ ಅವರು ಭಾಗವಸಿದ್ದರು.
ಕ್ಯಾನ್ಸರ್ ದಿನದಂದು ಸ್ವತಃ ನನ್ನ ಕೇಶದಾನ ಮಾಡಿ ಜನರಲ್ಲಿ ಈ ಕಾರ್ಯಕ್ರಮದ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿದ್ದೇನೆ. ಒಟ್ಟು 56 ಜನರು ಸ್ವಯಂ ಪ್ರೇರಿತರಾಗಿ ತಮ್ಮ ಕೇಶವನ್ನು ದಾನ ಮಾಡಿದ್ದಾರೆ. 6 ವರ್ಷ ದ ಕು. ಅಮೃತ ಕಾಮತ್ ಮತ್ತು 68 ವರ್ಷ ದ ಪ್ರಾಯದ ಶ್ರೀಮತಿ ವೀಣಾ ಶಾಂಬೋಗ್ ಮತ್ತು ಕೃಷ್ಣಪ್ಪ ಮತ್ತು ಸಾಗರ್ ಶೆಟ್ಟಿ ಅವರು ತಮ್ಮ 16ಇಂಚು
ಕೇಶ ವನ್ನು ದಾನ ಮಾಡಿರೋದು ಕಾರ್ಯಕ್ರಮ ದ ಆಕರ್ಷಣೆ ಆಗಿತ್ತು ಎಂದು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೋ. ರಮಿತಾ ಶೈಲೆಂದ್ರ ರಾವ್ ಅವರು ಮಾಹಿತಿ ನೀಡಿದರು.
ಯುವವಾಹಿನಿ ಘಟಕ ಕಾರ್ಕಳ ಸಂಘದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಅವರು ಸ್ವಾಗತಿಸಿದರು, ಕಾರ್ಯದರ್ಶಿ ತಾರಾನಾಥ್ ವಂದಿಸಿದರು. ಆನ್ ಸುಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸೌಂದರ್ಯ ಸಂಘ ಕಾರ್ಕಳ ಮತ್ತು ಉಡುಪಿಯ ಪೈಲ್ವಾನೋ, ಮರೀನಾ, ರೋ. ಅರುಣ್ ಮಾಂಜಾ, ಯುವವಾಹಿನಿ ಸಂಘದ ಸದಸ್ಯರು, ಆನ್ಸ್ ಕ್ಲಬ್ ಸದಸ್ಯರು ಕೇಶ ದಾನಿಗಳು ಮತ್ತು ಸಾರ್ವಜನಿಕರು ಉಪಸ್ಥಿರಿದ್ದರು.
Kshetra Samachara
22/02/2021 01:04 pm