ಕಾರ್ಕಳ: ಕೇಂದ್ರ ಸರಕಾರದ ಅಂತರ್ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ಅಧ್ಯಯನ ತಂಡ ಪ್ರಾಕೃತಿಕ ವಿಕೋಪ ಸಂಭವಿಸಿದ ಮಾಳ ಗ್ರಾಮದ ಪ್ರದೇಶಕ್ಕೆ ಸೆ.9ರಂದು ಭೇಟಿ ನೀಡಿತು. ಕೇಂದ್ರ ಅಧ್ಯಯನ ತಂಡದ ಜತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಈ ಪ್ರದೇಶಕ್ಕೆ ತೆರಳಿ ಅಧ್ಯಯನ ತಂಡಕ್ಕೆ ವಸ್ತುಸ್ಥಿತಿ ಮಾಹಿತಿ ನೀಡಿದರು. ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳಾದ ಮಾಳ ಹಾಗೂ ನೂರಾಳ್‌ಬೆಟ್ಟು ಪರಿಸರದಲ್ಲಿ ಈ ವಾರ ಭಾರೀ ಮಳೆಯಿಂದ ಮಾಳ-ನೂರಾಳ್‌ಬೆಟ್ಟು ಸಂಪರ್ಕ ಸೇತುವೆ ಕುಸಿದುಬಿದ್ದಿದೆ ಅಲ್ಲದೇ ಅಡಿಕೆ, ಭತ್ತದ ಗದ್ದೆಗಳಿಗೆ ಭಾರೀ ಹಾನಿಯಾಗಿತ್ತು.
ಮಾಳ ಗ್ರಾಮದಲ್ಲಿ ಉಂಟಾದ ನಷ್ಟದ ವಿವರಗಳ ಸಮಗ್ರ ವರದಿಯನ್ನು ಅಧಿಕಾರಿಗಳ ತಂಡ ಸಚಿವ ಸುನಿಲ್‌ಕುಮಾರ್ ಮೂಲಕ ಅಧಿಕಾರಿಗಳ ಅಧ್ಯಯನ ತಂಡಕ್ಕೆ ನೀಡಿದರು. ಕೇಂದ್ರ ತಂಡವು ಸ್ಥಳಿಯರಿಂದ ಮಳೆ ಹಾಗೂ ಹಾನಿಗೆ ಸಂಭವಿಸಿದ ಕುರಿತು ಸ್ಥಳೀಯರಿಂದಲೂ ಮಾಹಿತಿ ಪಡೆದುಕೊಂಡಿತು. ಕಾರ್ಕಳ ತಾಲೂಕಿನಲ್ಲಿ ಹೊಸ ಸೇತುವೆಗಳ ನಿರ್ಮಾಣ, ಹಾನಿಯ ವಸ್ತುಸ್ತಿತಿ, ಇತ್ಯಾದಿಗಳ ಬಗ್ಗೆ ಸಮಗ್ರ ವಿವರಣೆಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಸಚಿವರು ನೀಡಿದರು. ತಾಲೂಕಿನ ಅಂಡಾರು, ಪರಪ್ಪಾಡಿ, ನೂರಾಳ್‌ಬೆಟ್ಟು ಈ ಮೂರು ಕಡೆ ಹೊಸ ಸೇತುವೆ ಸೇರಿದಂತೆ ತಾಲೂಕಿಗೆ ಮಳೆಹಾನಿಗೆ ಸಂಭವಿಸಿದ ವಸ್ತುಸ್ಥಿತಿಗಳ ಬಗ್ಗೆ ವಿವರಿಸಿ, ಪರಿಹಾರಕ್ಕೆ ಸಚಿವರು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ಕುಮಾರ್, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್ ರಾಜಾನ್, ಹಣಕಾಸು ಇಲಾಖೆ ಉಪನಿರ್ದೇಶಕ ಮಹೇಶ್‌ಕುಮಾರ್, ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ಕಾರ್ಕಳ ತಹಶಿಲ್ದಾರ್ ಪ್ರದೀಪಕುಮಾರ್ ಕುರ್ಡೇಕರ್, ಡಿವೈಎಸ್ಪಿ ವಿಜಯಪ್ರಸಾದ್, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಗ್ರಾ.ಪಂ ಸದಸ್ಯರು, ಮುಖಂಡರು, ಸ್ಥಳಿಯರು ಉಪಸ್ಥಿತರಿದ್ದರು.
Kshetra Samachara
10/09/2022 12:39 pm