ಉಡುಪಿ: ಕಂದಾಯ ಇಲಾಖೆಯ ಭೂಮಿ ತಂತ್ರಾಂಶ ಮೂಲಕ ನಾನಾ ಸೇವೆ ಸಹಿತ ಕಡತ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ಕಳೆದ 15 ತಿಂಗಳಿನಿಂದ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ 800ರಲ್ಲಿ 603ಅಂಕ (ಶೇ.75.3) ಗಳಿಸಿದ್ದು ಕಲಬುರಗಿ ಜಿಲ್ಲೆ 113(ಶೇ.14.1) ಅಂಕಗಳೊಂದಿಗೆ 30ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನಿಗೂ, ದ್ವಿತೀಯ ಸ್ಥಾನಿ ಗದಗಕ್ಕೂ ಸಾಧನೆಯಲ್ಲಿ ಶೇ.21.3 ರಷ್ಟು ಅಂತರವಿದೆ. ವಿವಾದ ರಹಿತ ಭೂಮಿ ಮ್ಯುಟೇನ್ಸ್ ಅರ್ಜಿ ವಿಲೇವಾರಿ (ನೊಟೀಸ್ ನೀಡದೆ) 30ದಿನದೊಳಗೆ ಮಾಡಬೇಕಿದ್ದು ಉಡುಪಿ ಜಿಲ್ಲೆತೆ ಗೆದುಕೊಂಡ ಸಮಯ ಸರಾಸರಿ ಅರ್ಧ ದಿನ. ಹೀಗಾಗಿ 100ಅಂಕ ದೊರೆತಿದೆ.
30ದಿನಗಳ ಬಳಿಕ ವಿವಾದ ರಹಿತ ಮ್ಯುಟೇಶನ್ಸ್ (ನೊಟೀಸ್ ನೀಡಿ) ಅರ್ಜಿ ವಿಲೇವಾರಿ 33.1ದಿನದಲ್ಲಿ ಮಾಡಿದ ಸಾಧನೆಯಿಂದ 100ಅಂಕ ಸಿಕ್ಕಿದೆ. ವಿವಾದಿತ ಮ್ಯುಟೇಶನ್ಸ್ ಅರ್ಜಿಗಳನ್ನು 60ದಿನಗಳ ನಂತರ ಇತ್ಯರ್ಥ ಮಾಡಲು ಕೇವಲ 32.5 ದಿನಗಳನ್ನು ತೆಗೆದುಕೊಂಡಿದ್ದು 100ಅಂಕ ದಾಖಲಾಗಿದೆ.
ಅಫಿದಾವಿತ್ ಮತ್ತು ಡೀಮ್ಡ್ ಕನ್ವರ್ಶನ್‌ನಲ್ಲಿ ಮಾತ್ರ ಉಡುಪಿ ಜಿಲ್ಲೆ ಹಿಂದುಳಿದಿದೆ. ಶೇ.28.4 ಸಾಧನೆಯೊಂದಿಗೆ 32 ಅಂಕ ಗಳಿಸಲಷ್ಟೇ ಶಕ್ತವಾಗಿದೆ. 100 ಅಂಕ ಗಳಿಕೆಯ ಸಾಧನೆ ದಾವಣಗೆರೆ ಜಿಲ್ಲೆ ಪಾಲಾಗಿದೆ.
ಎಸಿ ಕೋರ್ಟ್ :
ಕಡತ ವಿಲೇವಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆ 100ಅಂಕ (ಶೇ.11.9ಪ್ರಗತಿ) ಗಳಿಸಿದ್ದರೆ ಉಡುಪಿ ಜಿಲ್ಲೆ ಶೇ.5.6 ಸಾಧನೆಯೊಂದಿಗೆ 47ಅಂಕ ಸಂಪಾದಿಸಿದೆ. ಇನ್ನು ಡಿಸಿ ಕೋರ್ಟ್ ಕಡತ ವಿಲೇವಾರಿಯಲ್ಲಿ ಶೇ.9.2ಸಾಧನೆಯೊಂದಿಗೆ 83 ಅಂಕವನ್ನು ಉಡುಪಿ ಗಳಿಸಿದರೆ ಗದಗ ಜಿಲ್ಲೆಯು ಶೇ.11.1ಸಾಧನೆಯೊಂದಿಗೆ 100ಅಂಕ ಗಳಿಸಿದೆ. ಆರ್ಟಿಸಿ ಕಾಲಂ 3ಮತ್ತು 9 ಮಿಸ್ ಮ್ಯಾಚ್ ಪ್ರಕರಣಕ್ಕೆ ಸಂಬಂಧಿಸಿದ ಕಡತ ವಿಲೇವಾರಿಯಲ್ಲಿಉಡುಪಿ ಜಿಲ್ಲೆಗೆ 100ಅಂಕ ದಕ್ಕಿದ್ದು ಶೇ.6.1ಸಾಧನೆ ಮಾಡಿದೆ. ಪಿವೈಕಿ ಆರ್ಟಿಸಿ ವಿಲೇವಾರಿ ಶೇ.8.5ರಷ್ಟಿದ್ದು 41ಅಂಕ ಸಿಕ್ಕಿದೆ. ಸಕಾಲದಡಿ 98 ಇಲಾಖಾ ಸೇವೆ ನೀಡುತ್ತಿದ್ದು 4ನೇ ಸ್ಥಾನ ಹಾಗೂ ಅಟಲ್ ಜನಸ್ನೇಹಿ ಕೇಂದ್ರದ ಮೂಲಕ ನೀಡುವ ಸೇವೆಯಲ್ಲಿಉಡುಪಿ ಜಿಲ್ಲೆ12 ನೇ ಸ್ಥಾನ ಗಳಿಸಿದೆ.
ಗ್ರಾ.ಪಂ.ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಸಿಬ್ಬಂದಿ, ಅಧಿಕಾರಿಗಳ ಸಮನ್ವಯದ ಕಾರ್ಯನಿರ್ವಹಣೆಯಿಂದ ಈ ಸಾಧನೆ ಸಾಧ್ಯವಾಗದೆ.ಸಕಾಲ, ಅಟಲ್ ಸ್ನೇಹಿ ಕೇಂದ್ರದಲ್ಲೂಪರಿಣಾಮಕಾರಿ ಜನಸೇವೆ, ಮೊದಲ ಸ್ಥಾನದ ಗುರಿಯಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
5 ಜಿಲ್ಲೆಯ ಟಾಪರ್ಸ್ ಅಂಕ(ಶೇ.):
ಉಡುಪಿ 603/800(75.3%)
ಗದಗ 432/800(54%)
ದಾವಣಗೆರೆ 390/800(48.7%)
ಚಿತ್ರದುರ್ಗ 291/800(35.1%)
ಬೆಳಗಾವಿ 273/800(34.1%)
ಕೊನೆಯ ಸ್ಥಾನಿಗಳು:-
ಕಲಬುರಗಿ 113/800(14.1%)
ಬೆಂಗಳೂರು ನಗರ 116/800(14.6%)
ಬೆಂಗಳೂರು ಗ್ರಾಮಾಂತರ 120/800(15%)
ಕೊಪ್ಪಳ 124/800(15.5%)
ಚಾಮರಾಜನಗರ 128/800(15.9%)
ಕೃಪೆ: ವಿಕ
Kshetra Samachara
10/02/2021 10:56 pm