ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್ಕೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾಹಿತಿ ಕಾರ್ಯಾಗಾರ ಉದ್ಘಾಟನೆ

ಉಡುಪಿ :"ಬದಲಾಗುತ್ತಿರುವ ಜಾಗತಿಕ ಆಥಿ೯ಕ ಶೈಕ್ಷಣಿಕ ರಂಗದಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ವಾಗಿ ಎದುರಿಸಿ ನಿಲ್ಲಬೇಕಾದರೆ ಅದಕ್ಕೆ ಪೂರಕವಾದ ಶಿಕ್ಷಣ ನೀಡ ಬೇಕಾದ ಅನಿವಾರ್ಯತೆ ಇದೆ.ಈ ದಿಕ್ಕಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಅರ್ಥಪೂರ್ಣವಾಗಿ ಸುದೃಢವಾಗಿ ಹೊರ ಹೊಮ್ಮಿದೆ.ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದ್ದು ವಿದ್ಯಾರ್ಥಿ ಸ್ನೇಹಿ ನೀತಿ ಅನ್ನಿಸಿಕೆುಾಂಡಿದೆ.ಗಳಿಸುವ ಜ್ಞಾನಕ್ಕೂ ಬದುಕಿನ ಉದ್ಯೋಗಕ್ಕೂ ನೇರ ಸಂಬಂಧ ಕಲ್ಪಿಸಿರುವುದು ಈ ನೀತಿಯ ವಿಶೇಷತೆ.ಸರ್ಕಾರ ಈಗಾಗಲೇ ರಾಷ್ಟ್ರೀಯ ಉತ್ಪನ್ನದ ಶೇ.6 ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲು ಮುಂದಾಗಿದ್ದು ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿಯೇ ಇದೊಂದು ಕ್ರಾಂತಿಕಾರಿ ನಿರ್ಧಾರ ವಾಗಿದ್ದು ಇದನ್ನು ಯಶಸ್ವಿ ಗೊಳಿಸುವಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು, ವಿದ್ಯಾರ್ಥಿಗಳು, ಪೇೂಷಕರು ಹೆಚ್ಚು ಆಸಕ್ತಿ ವಹಿಸಿ ಪಾಲುಗೊಳ್ಳಬೇಕಾದ ಅನಿವಾರ್ಯ ಇದೆ "ಎಂದು ಅಂಕಣಕಾರ, ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.ಅವರು ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಕೇೂಶದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಾಹಿತಿ ಕಾರ್ಯಾಗಾರ ಉದ್ಘಾಟನೆ ಮಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಶ್ರೀನಿವಾಸ ಶೆಟ್ಟಿ ವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

15/09/2021 01:09 pm

Cinque Terre

1.41 K

Cinque Terre

0

ಸಂಬಂಧಿತ ಸುದ್ದಿ