ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕೆ.ಸತೀಶ್ ಆಚಾರ್ಯ ಅವರಿಗೆ ಅಕಾಡೆಮಿಯ ಶಿಲ್ಪಶ್ರೀ ಪ್ರಶಸ್ತಿ

ಕಾರ್ಕಳ: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಕಾರ್ಕಳದ ಶಿಲ್ಪಾಗ್ರಾಮದ ಶಿಲ್ಪಿ ಕೆ. ಸತೀಶ್ ಆಚಾರ್ಯ ಆಯ್ಕೆಯಾಗಿದ್ದಾರೆ. ಒಟ್ಟು 10 ಮಂದಿ ಶಿಲ್ಪಿಗಳು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ರಾಘವೇಂದ್ರ ಗದಗ, ಶಿವಕುಮಾರ್ ಬೆಂಗಳೂರು, ನಾಗರಾಜ ಬಿ. ಕಂಬಾರ ಯಾದಗಿರಿ, ಕೆ. ಸುರೇಶ್ ಆಚಾರ್ಯ ವಿಜಯನಗರ, ವೀರೇಶ್ ಜಿ. ಮಾಯಾಚಾರ್ಯ ಬಾಗಲಕೋಟೆ, ನಾಗೇಂದ್ರ ಎಸ್. ಕಮಾರ ಧಾರವಾಡ, ಅಶೋಕ ಆ. ಬಡಿಗೇರ ಬೆಳಗಾವಿ, ನಿಂಗಪ್ಪಡಿ ಕೇರಿ ಕಲಬುರಗಿ, ಡಿ.ಎನ್. ಚಂದ್ರಶೇಖರ ಶಿವಮೊಗ್ಗ ಪ್ರಶಸ್ತಿಗೆ ಆಯ್ಕೆಯಾದವರು.

ಅ. 10ರಂದು ಸಂಜೆ 5 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಗುವುದು. ಪ್ರಶಸ್ತಿಯು ತಲಾ 25 ಸಾವಿರ ರೂ., ನಗದು, ನೆನಪಿನ ಕಾಣಿಕೆ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/10/2022 03:05 pm

Cinque Terre

966

Cinque Terre

0

ಸಂಬಂಧಿತ ಸುದ್ದಿ