ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜೂನ್ 1 ರಿಂದ ಜೂನ್ 10 ಕಡಿಯಾಳಿ ಬ್ರಹ್ಮಕಲಶೋತ್ಸವ

ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಜೂನ್ 1 ರಿಂದ ಪ್ರಾರಂಭಗೊಂಡು ಜೂನ್ 10 ರ ತನಕ ನಡೆಸಲಾಗುವುದು ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜೂನ್ 1 ಮಧ್ಯಾಹ್ನ 4:00 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಬಿರುದಾವಳಿ, ಕೀಲುಕುದುರೆ ನಾಡಿನ ಸಾಂಸ್ಕೃತಿಕ ವಿವಿಧ ತಂಡಗಳೊಂದಿಗೆ ಬೃಹತ್ ಹೊರಕಾಣಿಕೆಯ ಮೆರವಣಿಗೆ ನಡೆಸಲಾಗುವುದು. ಜೂನ್ 2 ರಂದು ಬೆಳಿಗ್ಗೆ ಉಷಃಕಾಲದಲ್ಲಿ ಪ್ರಾರ್ಥನೆ ಮಾಡಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಭಜನಾ ಮಂಡಳಿಗಳು ಮತ್ತು ಅತಿಥಿ ಭಜನಾ ತಂಡಗಳಿಂದ ನಿರಂತರ ಅಖಂಡ ಅಹೋರಾತ್ರಿ ಭಜನೆ ನಡೆಯಲಿದೆ. ಜೂನ್ 3 ರಂದು ಋತ್ವಿಜರ ಆಗಮನದಿಂದ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲಾಶಭಿಷೇಕ ಪಂಚ ದುರ್ಗ ಮಂತ್ರ ಹೋಮದೊಂದಿಗೆ ದಿನಾಂಕ 8/06/2022 ರ ಜೇಷ್ಠ ಶುದ್ಧ ಅಷ್ಟಮಿ ಬೆಳಿಗ್ಗೆ 7.50 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಅಂದು ರಾತ್ರಿ ರಥೋತ್ಸವ ನಡೆಯಲಿದೆ.

ಜೂನ್ 9 ರಂದು ಸಾಯಂಕಾಲ 7 ರಿಂದ ಪಿಲಿಚಂಡಿ ಮತ್ತು ಪರಿವಾರ ದೈವಗಳ ಬಾಳು ಭಂಡಾರ ಶ್ರೀ ಕ್ಷೇತ್ರದಿಂದ ಹೊರಟು ರಾತ್ರಿ ದೈವಗಳ ಕೋಲ ನಡೆಯಲಿದೆ ಎಂ್ಉ ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

04/05/2022 03:49 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ