ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುಕ್ಕೆಹಳ್ಳಿ ಬಂಟರ ಸಂಘ ಉದ್ಘಾಟನೆ: ಸನ್ಮಾನ ಕಾರ್ಯಕ್ರಮ

ಉಡುಪಿ: ಸತ್ಯ, ಧರ್ಮ ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟ ಸಮುದಾಯದ್ದು. ತುಳುನಾಡಿನಲ್ಲಿ ಈ ಸಮುದಾಯ ಸೌಹಾರ್ದತೆಯಿಂದ ಬದುಕುವುದರೊಂದಿಗೆ ಸಮಾಜದ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ ಹೇಳಿದರು.

ಅವರು ಬಂಟರ ಸಂಘ ಕುಕ್ಕೆಹಳ್ಳಿ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಂಘಟನೆಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ ತಮ್ಮ ಕೈಲಾದ ಸೇವೆಯನ್ನು ಮಾಡುವುದರೊಂದಿಗೆ ಸಮಾಜದಲ್ಲಿನ ಅಶಕ್ತರೊಂದಿಗೆ ನೆರವಿನ ಹಸ್ತ ಚಾಚುವುದರೊಂದಿಗೆ ಹೃದಯ ಶ್ರೀಮಂತಿಕೆಯನ್ನು ಹೊಂದಬೇಕು. ವ್ಯಕ್ತಿ ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಆತನ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರ,ಮದಲ್ಲಿ ಸಂಘದ ಲಾಂಛನವನ್ನು ತುಳು ಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ ಶೆಟ್ಟಿ ಅನಾವರಣಗೊಳಿಸಿದರು. ಈ ವೇಳೆ ಉದ್ಯಮಿಗಳಾದ ತುಳು ಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ ಶೆಟ್ಟಿ, ಹಾಗೂ ಸೂರತ್‌ ನ ಉದ್ಯಮಿ ಹರೀಶ್‌ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಕುಕ್ಕೆಹಳ್ಳಿ ಇದರ ಅಧ್ಯಕ್ಷರಾದ ಪ್ರಸಾದ್‌ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/02/2022 06:11 pm

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ