ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೆರಂಪಳ್ಳಿ ದೇವಳಕ್ಕೆ ನೂತನ ಉಸ್ತುವಾರಿ ಸಚಿವ ಎಸ್ .ಅಂಗಾರ ಭೇಟಿ

ಉಡುಪಿ: ರಾಜ್ಯ ಬಂದರು ಮೀನುಗಾರಿಕೆ , ಒಳನಾಡು ಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಗುರುವಾರ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಎನ್. ಪ್ರಸನ್ನ ಕುಮಾರ್ ರಾವ್ ಹಾಗೂ ಸಮಿತಿ ಸದಸ್ಯರು ಸಚಿವರನ್ನು ಬರಮಾಡಿಕೊಂಡರು.ಮಾಜಿ ಜಿ. ಪಂ ಅಧ್ಯಕ್ಷ ದಿನಕರಬಾಬು , ಹೆರ್ಗ ಜಯರಾಮ ತಂತ್ರಿಗಳು ಅರ್ಚಕ ಪ್ರದ್ಯುಮ್ನ ಭಟ್ ,ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪುಷ್ಪಾ ಪ್ರಭಾಕರ ಆಚಾರ್ಯ ,ಜಯಕುಮಾರ್ ಸಾಲ್ಯಾನ್ ಗಣಪತಿ ಪೂಜಾರಿ , ಶಂಕರ್ ಕುಲಾಲ್ , ಬಾಬು ನಾಯ್ಕ , ಉಮೇಶ್ ಶೆಟ್ಟಿ ಹಾಗೂ ಪ್ರಶಾಂತ್ ಭಟ್ , ನಗರಸಭಾ ಸ್ಮದಸ್ಯೆ ಅರುಣಾ ಸುಧಾಮ ಮೊದಲಾದವರಿದ್ದರು.

Edited By : PublicNext Desk
Kshetra Samachara

Kshetra Samachara

03/02/2022 06:14 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ