ಕಾರ್ಕಳ : ಕಾರ್ಕಳದಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಕ್ರಾಸ್ ಬಳಿ ಇಂದು ನಡೆದಿದೆ. ಅದೃಷ್ಟವಶಾತ್ ಪಿಕಪ್ ಚಾಲಕ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಈ ಅಪಾಯಕಾರಿ ತಿರುವಿನಿಂದ ಕೂಡಿದ ಇಳಿಜಾರು ರಸ್ತೆಯಲ್ಲಿ ಮೋರಿಯ ಕಾಂಕ್ರೀಟ್ ಸ್ಲಾö್ಯಬ್ ಕುಸಿದ ಪರಿಣಾಮ ಒಂದು ವಾರದ ಹಿಂದೆ ದುರಸ್ತಿಗೊಳಿಸಲಾಗಿತ್ತು. ಆದರೆ ಕಾಂಕ್ರೀಟ್ ಸ್ಲಾö್ಯಬ್ ಕ್ಯೂರಿಂಗ್‌ಗೆ ಎಂದು ಕಾಮಗಾರಿ ನಡೆದ ಜಾಗದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಪ್ರದೇಶದಲ್ಲಿ ಎರಡು ಕಡೆಯೂ ಇಳಿಜಾರಾಗಿರುವ ಹಿನ್ನೆಲೆಯಲ್ಲಿ ವಾಹನಗಳು ಅತೀವೇಗವಾಗಿ ಬಂದು ಪದೇಪದೇ ಅಪಘಾತ ಸಂಭವಿಸುತ್ತಿದೆ. ದುರಸ್ತಿಗೊಂಡ ಒಂದೇ ವಾರದಲ್ಲಿ ಇದು 2ನೇ ಅಪಘಾತವಾಗಿದ್ದು, ಲೋಕೋಪಯೋಗಿ ಇಲಾಖೆಯವರು ಆದಷ್ಟು ಬೇಗ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
27/09/2022 03:39 pm