ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಖಾತೆಯಿಂದ 93,804 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚನೆ ಎಸಗಿರುವ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪರ್ಕಳ ಸಣ್ಣಕ್ಕಿಬೆಟ್ಟುವಿನ ಸುಬ್ರಹ್ಮಣ್ಯ ಕೃಷ್ಣ ನಾಯ್ಕ (34) ಹಣ ಕಳೆದುಕೊಂಡವರು. ಇವರ ಮೊಬೈಲ್‌ಗೆ ಆ.21ರಂದು ಕೆ.ವೈಸಿ ಅಪ್ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್‌ನವರೆ ಕಳುಹಿಸಿರಬಹುದೆಂದು ತಿಳಿದ ಸುಬ್ರಹ್ಮಣ್ಯ ಲಿಂಕ್‌ನ್ನು ಓಪನ್ ಮಾಡಿದ್ದು, ಆಗ ಬಂದ ಓಟಿಪಿಯನ್ನು ಅಪಡೇಟ್ ಮಾಡಿದ ತಕ್ಷಣ ಇವರ ಬ್ಯಾಂಕ್ ಖಾತೆಯಿಂದ ಒಟ್ಟು 93,804ರೂ. ಹಣ ಕಡಿತಗೊಂಡಿದೆ. ತಕ್ಷಣ ಅವರು ದೂರು ದಾಖಲಿಸಿದ್ದಾರೆ.
Kshetra Samachara
22/08/2022 08:43 pm