ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಬೆದರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳ್ಳತನ ಮಾಡಿದ ದುಷ್ಕರ್ಮಿಗಳು: ದೂರು ದಾಖಲು

ಹೆಬ್ರಿ : ದುಷ್ಕರ್ಮಿಗಳ ತಂಡವೊಂದು ಕತ್ತಿ ತೋರಿಸಿ ಬೆದರಿಸಿ ದನದ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ಕಳವು ಮಾಡಿದ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಬಾಲ್ಟಾರು ಎಂಬಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಬಂದ ಮೂವರು ದಯಕರ ಗೌಡ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ದನಗಳ ಪೈಕಿ ಎರಡು ದನಗಳನ್ನು ಕಳವುಗೈದು ಎಳೆದುಕೊಂಡು ಹೋಗುತ್ತಿದ್ದು, ಈ ವೇಳೆ ಮನೆಯವರು ದನಗಳನ್ನು ಬಿಡಿಸಿಕೊಳ್ಳಲು ಮುಂದೆ ಹೋದಾಗ ದುಷ್ಕರ್ಮಿಗಳು ಕತ್ತಿಯನ್ನು ತೋರಿಸಿ ಹೆದರಿಸಿ ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಎರಡು ದನಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಎರಡು ದನಗಳ ಮೌಲ್ಯ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

23/06/2022 11:50 am

Cinque Terre

2.83 K

Cinque Terre

1

ಸಂಬಂಧಿತ ಸುದ್ದಿ