ಉಡುಪಿ: ಉಡುಪಿಯ ಮಹಾಲಕ್ಷ್ಮಿ ಬ್ಯಾಂಕ್ ವಿರುದ್ಧ ಕೋಟ್ಯಂತರ ರೂ.ವಂಚನೆ ಆರೋಪ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು.ಈ ಸಂಬಂಧ ಸಂತ್ರಸ್ತರು ಜಿಲ್ಲಾಧಿಕಾರಿಗೆ ದೂರನ್ನೂ ನೀಡಿದ್ದರು. ಇದೀಗ ಸರ್ಕಾರ , ಈ ಪ್ರಕರಣವನ್ನು ಸಹಕಾರ ನಿಯಮದ ಕಲಂ 64ರ ಅಡಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರನ್ನು ನೇಮಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂತ್ರಸ್ತರು ,ಈಗಾಗಲೇ ನಮ್ಮ ಮೇಲೆ ಒತ್ತಡ ಹೇರುವ ಹಾಗೂ ಆಮಿಷ ಒಡ್ಡುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ತನಿಖೆಗೆ ತಡೆಯಾಜ್ಞೆ ತರುವ ಪ್ರಯತ್ನವೂ ನಡೆಯಬಹುದು. ಹೀಗಾಗಿ ಆದಷ್ಟು ಬೇಗ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದೂ ಸಂತ್ರಸ್ತರು ಆಗ್ರಹ ಮಾಡಿದ್ದಾರೆ.
Kshetra Samachara
12/12/2024 07:03 pm