ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಸ್ಸಾಂ ಮೂಲದ ಕಾರ್ಮಿಕನ ಹತ್ಯೆಗೈದ ವೃದ್ಧ ಅರೆಸ್ಟ್

ಮಂಗಳೂರು: ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿಯ ಗ್ರಾಮ ಪಂಚಾಯತ್ ಬಳಿಯ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್‌ ಬೆಂಗರ (34)ನನ್ನು ಕೊಲೆಗೈದ ಪ್ರಕರಣದಲ್ಲಿ ವೃದ್ಧ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ಮನೆ ನಿವಾಸಿ ಬಾಬು ಅಲಿಯಾಸ್ ರುದ್ರ (68) ಬಂಧಿತ ಆರೋಪಿ. ಕೆಲ ಸಮಯಗಳ ಹಿಂದೆ ಈತ ಸ್ಥಳೀಯ ಬಾರ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ತೊಡಗಿಸಿಕೊಂಡಿದ್ದ.

ಅಸ್ಸಾಂ ಮೂಲದ ದೀಪಕ್‌ ಬೆಂಗರ ಕಳೆದ ಬುಧವಾರ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಿರ್ಗತಿಕನಂತೆ ಬೀದಿಬದಿ, ಜನವಸತಿ ಇಲ್ಲದ ಕಟ್ಟಡದಲ್ಲಿ ದೀಪಕ್ ಮಲಗುತ್ತಿದ್ದರಿಂದ ಆತನೊಂದಿಗೆ ಇರುವವರ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್‌ ಇಲಾಖೆಗೆ ಕಷ್ಟವಾಗಿತ್ತು. ಪೊಲೀಸರು ಬಸ್‌ ನಿಲ್ದಾಣ ಪರಿಸರದಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಶಂಕಿತ ಆರೋಪಿಯ ಚಲನವಲನಗಳು ಪತ್ತೆಯಾಗಿದೆ.

ಆದ್ದರಿಂದ ಬಾಬು ಯಾನೆ ರುದ್ರನನ್ನು ಉಳ್ಳಾಲದ ದೇರಳಕಟ್ಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್‌., ಎಸ್‌ಐ ಅವಿನಾಶ್‌ ಎಚ್‌., ಸಿಬಂದಿಗಳಾದ ಶಿವರಾಮ್‌, ಹಿತೋಷ್‌, ಗಿರೀಶ್‌, ರಾಮಣ್ಣ ಗೌಡ, ಹೇಮರಾಜ್‌, ಮಹದೇವ, ನಾಗರಾಜ್‌, ಪ್ರವೀಣ್‌ ರೈ, ಹರಿಶ್ಚಂದ್ರ, ತಾಂತ್ರಿಕ ವಿಭಾಗದ ದಿವಾಕರ್‌ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

Edited By : Vijay Kumar
Kshetra Samachara

Kshetra Samachara

12/12/2024 10:55 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ