ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ದೇವಚಳ್ಳ ಶಾಲಾ ಮುಖ್ಯ ಶಿಕ್ಷಕರಿಗೆ ಜೀವಬೆದರಿಕೆ -ದೂರು

ಸುಳ್ಯ : ವ್ಯಕ್ತಿಯೊಬ್ಬರು ರಾತ್ರಿ ಶಾಲಾ ವಠಾರಕ್ಕೆ ಬಂದು ಶಾಲಾ ಮುಖ್ಯ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಘಟನೆ ಎಲಿಮಲೆಯಲ್ಲಿ ನಡೆದಿದೆ.

ಎಲಿಮಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಶತಮಾನೋತ್ಸವ ಸಂಭ್ರಮದಲ್ಲಿದ್ದು ಹಗಲು ರಾತ್ರಿ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿದೆ. ಕಾಮಗಾರಿ ವೀಕ್ಷಿಸಲು ಮುಖ್ಯಶಿಕ್ಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶತಮಾನೋತ್ಸವ ಸಮಿತಿಯವರು ಬಂದಿದ್ದರು.

ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಶತಮಾನೋತ್ಸವದ ಲಕ್ಕಿಡಿಪ್ ವಿಚಾರವಾಗಿ ಚರ್ಚಿಸುತ್ತಿದ್ದ ವೇಳೆ ಮುಖ್ಯ ಶಿಕ್ಷಕ ಶ್ರೀಧರ ಗೌಡ ಚರ್ಚೆ ನಡೆಯುತ್ತಿದ್ದ ಕೊಠಡಿಯ ಸಮೀಪ ಬಂದಾಗ ಮಣಿಕಂಠ ಎಂಬಾತ ಮುಖ್ಯ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಹೊರಗೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ.

ಈ ಬಗ್ಗೆ ಮುಖ್ಯ ಶಿಕ್ಷಕ ಶ್ರೀಧರ ಗೌಡ ಸುಬ್ರಹ್ಮಣ್ಯ ಪೊಲೀಸ್, ಠಾಣೆಗೆ ಮಣಿಕಂಠ ವಿರುದ್ದ ದೂರು ನೀಡಿದ್ದಾರೆ. ಹಾಗೂ ಶಾಲಾಭಿವೃದ್ಧಿ, ಮತ್ತು ಮೇಲುಸ್ತುವಾರಿ ಸಮಿತಿಯವರು ಕೂಡಾ ಮಣಿಕಂಠ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

12/12/2024 09:43 pm

Cinque Terre

450

Cinque Terre

0

ಸಂಬಂಧಿತ ಸುದ್ದಿ