ಮಣಿಪಾಲ: ಆಂತರಿಕ ಭದ್ರತಾ ವಿಭಾಗದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿರುವ ಮಣಿಪಾಲ ಪೊಲೀಸರು, ಡ್ರಗ್ಸ್ ಜಾಲವೊಂದನ್ನು ಭೇದಿಸಿದ್ದಾರೆ. ಸದ್ಯ ಓರ್ವ ಆರೋಪಿ ಸಿಕ್ಕಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ.
ಪೊಲೀಸರು ಉತ್ತರ ಭಾರತ ಮೂಲದ ಯುವಾಂಶು ಜೋಶಿ(20) ಎಂಬ ಆರೋಪಿಯನ್ನು ಬಂಧಿಸಿ, ಆತನಿಂದ ಎಂಡಿಎಂಎ ಡ್ರಗ್ ವಶಪಡಿಸಿಕೊಂಡಿದ್ದು, ಅಂದಾಜು ಮೌಲ್ಯ ಸುಮಾರು ಹತ್ತು ಲಕ್ಷ ರೂ. ಎನ್ನಲಾಗಿದೆ. ಈ ದಂಧೆಯಲ್ಲಿ ಇನ್ನಷ್ಟು ಜನ ಇರುವ ಸಾಧ್ಯತೆಗಳಿದ್ದು,ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
Kshetra Samachara
04/10/2020 06:10 pm