ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಏಣಗುಡ್ಡೆಯಲ್ಲಿ ಮಟ್ಕಾ ಅಡ್ಡೆಗೆ ದಾಳಿ; ಓರ್ವ ವಶಕ್ಕೆ

ಕಾಪು : ಕಾಪು ಠಾಣಾ ವ್ಯಾಪ್ತಿಯ ಏಣಗುಡ್ಡೆ ಗ್ರಾಮದ ಪಂಚಮಿ ಸ್ಟೋರ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಕಾಪು ಪೊಲೀಸರು ಆರೋಪಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ ಪುತ್ತೂರು ನಿವಾಸಿ ಪ್ರಮೋದ್ ಕುಮಾರ್(20) ಬಂಧಿತನಾಗಿದ್ದು, ಏಣಗುಡ್ಡೆ ಗ್ರಾಮದ ಪಂಚಮಿ ಸ್ಟೋರ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಬಗ್ಗೆ ಕಾಪು ಠಾಣಾಧಿಕಾರಿ ರಾಜಶೇಖರ್ ಬಿ.ಸಾಗನೂರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ ಸಾಗನೂರು ಅವರು ಆರೋಪಿಯನ್ನು ವಶಕ್ಕೆ ಪಡೆದು, ಆತನಲ್ಲಿ ಜೂಜಾಟಕ್ಕೆ ಬಳಸಲಾದ 5020 ರೂ. ನಗದು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Edited By :
Kshetra Samachara

Kshetra Samachara

23/09/2020 09:47 pm

Cinque Terre

11.67 K

Cinque Terre

0

ಸಂಬಂಧಿತ ಸುದ್ದಿ