ಕಾರ್ಕಳ: ಎಣ್ಣೆಹೊಳೆಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಏತ ನೀರಾವರಿ ಯೋಜನೆ ಸಂಪೂರ್ಣ ವೈಫಲ್ಯದಿಂದ ಕೂಡಿದ್ದು, ಯೋಜನೆ ಕಾರ್ಯಗತಗೊಳಿಸಲು ಜಾಗ ಗುರುತಿಸುವ ಕಾರ್ಯ ಒಂದೆಡೆ ನಡೆಸಿದರೆ ಕಾಮಗಾರಿ ನಡೆಯುತ್ತಿರುವ ಜಾಗವೇ ಬೇರೆಡೆಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಹಲವು ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ನಾಗರಿಕರು ಬೀದಿಗೆ ಇಳಿಯಬೇಕಾದೀತು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುದ್ರಾಡಿ ಆರೋಪಿಸಿದ್ದಾರೆ.
ಹೆಬ್ರಿ, ನಿಟ್ಟೆ ಪ್ರದೇಶದಲ್ಲಿ ಅನುಷ್ಠಾನಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರೀಕ್ಷೆ ಮಟ್ಟದಲ್ಲಿ ಪ್ರಗತಿಯಾಗಿಲ್ಲ, ಯೋಜನೆ ರೂಪದಲ್ಲಿ ಅದರ ಪ್ರಯೋಜನ ನಾಗರಿಕರಿಗೆ ಲಭಿಸದೇ ಕೋಟ್ಯಂತರ ರೂ. ನೀರು ಪಾಲಾಗಿದೆ. ಅಂತಹ ಪಟ್ಟಿಯಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸೇರ್ಪಡೆಗೊಳ್ಳದಿರಲಿ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವ ದೇವಾಡಿಗ, ಪಂಚಾಯತ್ ರಾಜ್ ಒಕ್ಕೂಟ ಅಧ್ಯಕ್ಷೆ ಶಶಿಕಲಾ ಪೂಜಾರಿ, ಮುದ್ರಾಡಿ ಗ್ರಾಪಂ ಮಾಜಿ ಸದಸ್ಯ ವಿಷು, ಹೆಬ್ರಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಅಜೆಕಾರು ಯುವ ಕಾಂಗ್ರೆಸ್‌ನ ಆಸ್ವಿನ್ ರೋಡ್ರಿಗಸ್, ಸ್ಥಳೀಯರಾದ ಅರವಿಂದ್ ನಾಯಕ್, ಹಾಜಿ ಡಿ. ಎಣ್ಣೆಹೊಳೆ, ರಿಯಾಜ್ ಎಣ್ಣೆಹೊಳೆ ಉಪಸ್ಥಿತರಿದ್ದರು.
Kshetra Samachara
26/09/2020 08:43 pm