ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವಿಜೃಂಭಣೆಯ ದಸರಾ ಮಹೋತ್ಸವ; ಮಾರ್ದನಿಸಿದ ಮಕ್ಕಳ ಕಲರವ

ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಮುಂದುವರೆದಿದ್ದು, ಇಂದು ಮಕ್ಕಳ ದಸರಾದಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರು. ಗೋಪಿ ವೃತ್ತದಲ್ಲಿ ಮಕ್ಕಳ ಕಲರವ ಮುಗಿಲು ಮುಟ್ಟಿತ್ತು. ಸಾವಿರಾರು ಮಕ್ಕಳು ಒಟ್ಟಿಗೆ ಸೇರಿ ಮಕ್ಕಳ ದಸರಾದಲ್ಲಿ ಸಂಭ್ರಮಿಸಿದರು. ನೃತ್ಯ ಮಾಡಿದರು. ಕೀಲು ಕುದುರೆ ಇತರೆ ಜಾನಪದ ಕಲಾತಂಡಗಳು ಭಾಗಿಯಾಗಿದ್ದವು.

ಮಕ್ಕಳ ದಸರಾವನ್ನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಪಂಚಮಿ, ನಯನಾ ಸಿದ್ದಪ್ಪ ಪೂಜಾರ್ ಅವರು ಉದ್ಘಾಟಿಸಿದರು. ನಗರದ ಸರ್ಕಾರಿ ಹಾಗೂ ಅನುದಾನ ಮತ್ತು ಅನುದಾನರಹಿತ ಶಾಲೆಗಳ ಸಾವಿರಾರು ಸಂಖ್ಯೆಯ ಮಕ್ಕಳು ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಿದರು. ಈ ವೇಳೆ, ಮೇಯರ್ ಸುನಿತಾ ಅಣ್ಣಪ್ಪ, ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್ ಮೊದಲಾದವರಿದ್ದರು.

Edited By :
PublicNext

PublicNext

28/09/2022 08:15 pm

Cinque Terre

36.17 K

Cinque Terre

0

ಸಂಬಂಧಿತ ಸುದ್ದಿ