ಸಾಗರ: ಪದೇ ಪದೇ ಈ ಘಟನೆಯಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗಿರುತ್ತದೆ ಆದ್ದರಿಂದ ತಾವು ಈ ಕೂಡಲೇ ಸರ್ವೆಗೆ ಆದೇಶ ನೀಡಿ ಸರ್ಕಾರಿ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಅರಳಿಕೊಪ್ಪ ಗ್ರಾಮಸ್ಥರು ಉಪ ವಿಭಾಗಾಧಿಕಾರಿ ಯತೀಶ್ ಅರ್ ರವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ಗ್ರಾಮಸ್ಥರು ಉಪ ವಿಭಾಗಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಸುವ ಮೂಲಕ ವಸತಿ ಬಡಾವಣೆಯಲ್ಲಿನ ನಿವೇಶನದ ಅತಿಕ್ರಮಣ ಜಾಗದಲ್ಲಿ ಅಕ್ರಮ ಕಾಮಗಾರಿ ಆರಂಭಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಮನೆ ಗ್ರಾಮಪಂಚಾಯಿತಿ ಅಧ್ಯಕ್ಷ ಅಮರನಾಥ, ಕಲ್ಮನೆ ಗ್ರಾಮ ಪಂಚಾಯಿತಿಗೆ ಸೇರಿದ ಅರಳಿಕೊಪ್ಪ ಗ್ರಾಮದ ಸರ್ವೆ ನಂ:36 ರಲ್ಲಿ ವಸತಿ ಬಡಾವಣೆಯಲ್ಲಿನ ನಿವೇಶನ ನಂ:21 ಮತ್ತು 22 ರಲ್ಲಿ ಇದು ಆಶ್ರಯ ನಿವೇಶನವಾಗಿದ್ದು ಇದಕ್ಕೆ ಹೊಂದಿಕೊಂಡಿದ್ದ ಸರ್ಕಾರಿ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಕೊಂಡಿರುತ್ತಾರೆ.ಕಾಂಪೌಂಡ್ ತೆರವುಗೊಳಿಸಲು ಈ ಹಿಂದೆ ಮನವಿ ಮಾಡಿದ್ದೇವೆ. ಅಲ್ಲದೆ ದಿನಾಂಕ: 21/1I/2024 ರಂದು ಮಾನ್ಯ ತಹಶೀಲ್ದಾರ್ ಹಾಗೂ ಮಾನ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸಾಗರ ಇವರಗಳಿಗೆ ಮನವಿ ಸಲ್ಲಿಸಿರುತ್ತೇವೆ. ಇದುವರೇಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಇದರ ಬೆನ್ನೆಲೆ - ದಿನಾಂಕ:08/12/2024 ರ ಬೆಳಗ್ಗೆ ಈ ಅಕ್ರಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ ವ್ಯಕ್ತಿಯು ಜನರ ಗುಂಪು ಕಟ್ಟಿಕೊಂಡು ಬಂದು ಜೆ.ಸಿ.ಬಿಯ ಜೊತೆಗೆ ಅಕ್ರಮಿಸಿಕೊಂಡಿದ ಸರ್ಕಾರಿ ಜಾಗದಲ್ಲಿ ಅಕ್ರಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ನಾವು ಪೋಲೀಸರಿಗೆ ಮಾಹಿತಿ ನೀಡಿದ ಕಾರಣ ಪೋಲೀಸರು ಸ್ಥಳಕ್ಕೆ ಆಗಮಿಸಿ ಜೆ.ಸಿ.ಬಿ ಹಾಗೂ ಅಳವಡಿಸಿದ ಸ್ಥಳೀಯ ಶಾಸಕರ ಹೆಸರು ಇರುವ ಪ್ಲೇಕ್ಸ್‌ನ್ನು ತೆರುಗೊಳಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ನೆಲೆಸಿದ್ದಾರೆ.
ಆದರೆ ಪದೇ ಪದೇ ಈ ಘಟನೆಯಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗಿರುತ್ತದೆ ಆದ್ದರಿಂದ ಈ ಕೂಡಲೇ ಸರ್ವೆಗೆ ಆದೇಶ ನೀಡಿ ಸರ್ಕರಿ ಜಾಗವನ್ನು ತೆರವುಗೊಳಿಸಿ ಸಾರ್ವಜನಿಕ ಕೆಲಸಗಳಿಗೆ ಅನುವುಗೊಳಿಸಿಕೊಡಬೇಕೇಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂತೋಷ್ ಶಿವಾಜಿ, ಮಪು ಇಕ್ಕೇರಿ, ಸುರೇಶ್ ಗೌಡರು, ವೆಂಕಟೇಶ್, ಮೋಹನ್ ರಾಘವೇಂದ್ರ ಹಾಗೂ ಇನ್ನಿತರು ಹಾಜರಿದ್ದರು.
Kshetra Samachara
09/12/2024 02:24 pm