ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಚಿವ ಹರತಾಳು ಹಾಲಪ್ಪ, ರೈತ ಮುಖಂಡರ ನಡುವೆ ಮಾತಿನ ಚಕಮಕಿ

ಸಾಗರ: ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹಾಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸೋಮವಾರ ರಾತ್ರಿ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ನಡೆದಿದೆ.

ಮಲೆನಾಡು ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸಾಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿದೆ. ಸ್ಥಳಕ್ಕೆ ಆಗಮಿಸಿ ರೈತರ ಜೊತೆ ಹೋರಾಟದ ಚರ್ಚೆ ನಡೆಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪಗೆ ರೈತ ಮುಖಂಡರು ಹಲವು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಅಧಿಕಾರ ಇದ್ದ ಸಂದರ್ಭದಲ್ಲಿ ಮಲೆನಾಡಿನ ರೈತರ ಹಾಗೂ ಮುಳುಗಡೆ ಸಂತ್ರಸ್ತರ ಬಗ್ಗೆ ಧ್ವನಿ ಯಾಕೆ ಎತ್ತಿಲ್ಲ? ಈಗ ಅಧಿಕಾರ ಇಲ್ಲ. ಈಗ ಬಂದರೆ ಏನ್ ಪ್ರಯೋಜನ? ಚುನಾವಣೆ ಹತ್ತಿರ ಬಂದರೆ ಎಲ್ಲ ರಾಜಕಾರಣಿಗಳಿಗೆ ಮುಳುಗಡೆ ಸಂತ್ರಸ್ಥರ ಬಗ್ಗೆ ಯೋಚನೆ ಬರುತ್ತದೆ ಯಾಕೆ? ಎಂದು ಪ್ರಶ್ನೆ ಮಾಡಿದ ರೈತ ಮುಖಂಡರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ನಾನು ಮುಳುಗಡೆ ಸಂತ್ರಸ್ಥ ಅನೇಕ ಬಾರಿ ಮುಳುಗಡೆ ಸಂತ್ರಸ್ಥರ ವಿಚಾರದ ಬಗ್ಗೆ ಧ್ವನಿ ಎತ್ತಿದನೇ ಎಂದು ಹೇಳುವ ಸಂದರ್ಭದಲ್ಲಿ ರೈತ ಮುಖಂಡರು ನಾವು ಯಾದಿಂಗೂ ನೋಡೆ ಇಲ್ಲ ನಾವು ಅನೇಕ ಬಾರಿ ನಿಮ್ಮ ಜೊತೆ ಅಧಿವೇಶನ ಸಂದರ್ಭದಲ್ಲಿ ಬಂದಿದ್ದೆವೆ ನಾವು ನೋಡಿಯೇ ಇಲ್ಲ ಎಂದು ಹೇಳುವ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಬೆಂಬಲಿಗ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ರೈತ ಮುಖಂಡರಾದ ಶಂಕರಮೂರ್ತಿ, ಎಂ. ಎಚ್ . ರಾಘವೇಂದ್ರ ಸಂಪೋಡಿ ನಡುವೆ ಮಾತಿನ ಚಕಮಕಿ ನಡೆಯಿತು.

ಒಟ್ಟಾರೆ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಕೆಲವು ಘಟನೆಗಳ ಕಾಲ ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಅವರ ಬೆಂಬಲಿಗರ ನಡುವೆ ರೈತ ಮುಖಂಡರು ವಾಗ್ವಾದ ನಡೆಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಂಕರಮೂರ್ತಿ, ಹಾಗೂ ಎಂ. ಎಚ್. ರಾಘವೇಂದ್ರ ಸಂಪೋಡಿ ಘಟನೆಯ ಬಗ್ಗೆ ಮಾಹಿತಿ ನೀಡುವ ಜೊತೆಗೆ ಕೆಲವು ದಾಖಲೆಗಳನ್ನು ತೋರಿಸಿದರು.

Edited By : Ashok M
PublicNext

PublicNext

22/10/2024 08:02 am

Cinque Terre

15.19 K

Cinque Terre

0

ಸಂಬಂಧಿತ ಸುದ್ದಿ