ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಬಿಜೆಪಿ ಭಾರತೀಯ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ ಆಗಿದೆ - ಬಿಜೆಪಿ ನಾಯಕರ ಮೇಲೆ ಪೋಕ್ಸೋ ಕೇಸುಗಳಿವೆ - ಆಯನೂರು ವಾಗ್ದಾಳಿ

ಶಿವಮೊಗ್ಗ : ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂದು ಟೀಕಿಸಿದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಬಿಜೆಪಿಯೇ ಭ್ರಷ್ಟಾಚಾರದ ಜನಕ ಎಂದು ಟೀಕಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಸಂಸದರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಮೇಲೆಯೇ ಬಿಜೆಪಿಯಲ್ಲಿ ಬಿಜೆಪಿ ಭ್ರಷ್ಟಾಚಾರ ಜನತಾ ಪಾರ್ಟಿಯಾಗಿದ್ದು, ಎರಡು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಭ್ರಷ್ಟಾಚಾರಗಳ ಕಾರಣದಿಂದಲೇ ಐದು ವರ್ಷಗಳ ಅವಧಿ ಪೂರೈಸದೆ ರಾಜೀನಾಮೆ ನೀಡಬೇಕಾಯಿತು. ಅವರ ಕಣ್ಣೀರ ಧಾರೆಗೆ ಕಾರಣ ಯಾರು? ಜಿಲ್ಲೆಯಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ ಅವರು, ಬಿಜೆಪಿಗೆ ರಾಘವೇಂದ್ರ, ವಿಜಯೇಂದ್ರ ಬಂದ ನಂತರ ಭ್ರಷ್ಟಾಚಾರ ಜನಕ ಪಕ್ಷವಾಗಿದೆ ಎಂದು ಟೀಕೆ ಮಾಡಿದ್ದಾರೆ.

ಬಿ.ವೈ. ರಾಘವೇಂದ್ರ ಅವರೇ ನೀವು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಕೋಟಿ ರೂ.ಗಳ ಬೇನಾಮಿ ಆಸ್ತಿಗಳನ್ನು ಟ್ರಸ್ಟ್ ಗಳ ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಕೊಂಡಿದ್ದೀರಾ. ಹಣದ ಮೂಲವನ್ನು ತಾವು ಪ್ರಕಟ ಮಾಡಬಹುದಾ? ಭ್ರಷ್ಟಾಚಾರದ ಆರೋಪದ ಮೇಲೆ ಒಬ್ಬ ಹೋರಾಟಗಾರನ ಅಂತ್ಯ ಆಗಿದೆ. ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವಂತೆ ಯಡಿಯೂರಪ್ಪ ಅವರನ್ನು ಬಲಿ ತೆಗೆದುಕೊಂಡಿದ್ದು ಬಿಜೆಪಿಯ ಭ್ರಷ್ಟಾಚಾರವೇ ಹೊರತು, ಬೇರಾವ ಜನಾಂದೋಲನಗಳಲ್ಲ. ತಮ್ಮ ಮತ್ತು ಕುಟುಂಬದ ಭ್ರ್ರಷ್ಟಾಚಾರದ ಕಾರಣದಿಂದ ಹೈಕಮಾಂಡ್ ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ದ ಮಾತು ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.

Edited By : Suman K
PublicNext

PublicNext

21/10/2024 06:44 pm

Cinque Terre

19.45 K

Cinque Terre

4

ಸಂಬಂಧಿತ ಸುದ್ದಿ