ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅರಣ್ಯಾಧಿಕಾರಿಗಳಿಂದಲೇ ಅರಣ್ಯ ಲೂಟಿ - ತನಿಖೆಗಾಗಿ ದೂರು

ಶಿವಮೊಗ್ಗ : ರಕ್ಷಕರೇ ಇಲ್ಲಿ ಭಕ್ಷಕರಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅರಣ್ಯಾಧಿಕಾರಿಗಳೇ ಅರಣ್ಯವನ್ನು ಲೂಟಿ ಮಾಡಲು ಅವಕಾಶ ನೀಡಿರುವ ಗಂಭೀರ ಆರೋಪ ಕೇಳಿ‌ ಬಂದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸಹಳ್ಳಿ ಹೋಬಳಿಯ ಅರಣ್ಯ ನಡುತೋಪಿನ ಅಕ್ರಮ ಕಡಿತಲೆಯಲ್ಲಿ ಅರಣ್ಯ ಅಧಿಕಾರಿಗಳೇ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ತಾಳಗುಪ್ಪ ಹೋಬಳಿಯ ಹೊಸಹಳ್ಳಿ ಸರ್ವೆ ನಂಬರ್ 11.31.141 ಮತ್ತು 142 ರ ಹಂಸಗಾರು ಹಾಗೂ ಗಿಳಿಗಾರು ಗ್ರಾಮಗಳ ವ್ಯಾಪ್ತಿಯ ಅಕೇಶಿಯ ನಡುತೋಪಿನಲ್ಲಿ ಅಕ್ರಮವಾಗಿ ಅಕೇಶಿಯ ಮರಗಳನ್ನು ಕಡಿತಲೆ ಮಾಡಲಾಗಿದೆ.

ಇದು ನಿರಂತರವಾಗಿದ್ದು, ಇದನ್ನು ತಡೆಯುವಲ್ಲಿ ತಾಳಗುಪ್ಪ ವಿಭಾಗದ ಉಪ ಅರಣ್ಯಾಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಅರಣ್ಯ ರಕ್ಷಕ ನಾಗರಾಜ್ ರವರು ವಿಫಲರಾಗಿದ್ದಾರೆ. ಅಲ್ಲದೇ ಮರಗಳ ಕಡಿತಲೆಯಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರುಗಳು ಮರಗಳ ಕಡಿತಲೆ ಮಾಡಿ ಸುಮಾರು 2 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಹೊಸಹಳ್ಳಿ ಗ್ರಾಮಸ್ಥರು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಹೊಸಹಳ್ಳಿ ಗ್ರಾಮ ಅಕೇಶಿಯ ನಡುತೋಪು ಅಕ್ರಮ ಕಡಿತಲೆ ಕುರಿತು, ಭಾಗಿಯಾಗಿರುವ ಕುರಿತು ಸೂಕ್ತ ತನಿಖೆ ನಡೆಸಿ, ಸೂಕ್ತ ವರದಿ ನೀಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಚಾರಿ ದಳಕ್ಕೆ ಸೂಚಿಸಿದ್ದಾರೆ. ಅರಣ್ಯ ಸಚಿವರ ಪತ್ರದ ಹಿನ್ನೆಲೆಯಲ್ಲಿ ಸಾಗರ ಡಿಎಫ್ ಓ ಮೋಹನ್ ಹೊಸಹಳ್ಳಿ ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಆದರೆ ಇಲ್ಲಿನ ಸರ್ಕಾರಿ ಅಕೇಶಿಯ ನಡುತೋಪಿನಲ್ಲಿ ಐದಾರು ವರ್ಷಗಳಿಂದ ಅಕ್ರಮವಾಗಿ ಅಕೇಶಿಯ ಮರಗಳ ಕಡಿತಲೆ‌ ಮಾಡಲಾಗುತ್ತಿದೆ. ಈ ಕುರಿತು ಕ್ರಮ ಜರುಗಿಸಬೇಕಾದ ಅರಣ್ಯ ಅಧಿಕಾರಿ ಸಂತೋಷ್ ಹಾಗೂ ಅರಣ್ಯ ರಕ್ಷಕ ನಾಗರಾಜ್ ಇವರೇ, ಮರಗಳ ಕಡಿತಲೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಇವರ ಮೇಲೆ ಕ್ರಮ ಜರುಗಿಸಬೇಕು ಹಾಗೂ ಕೆಲಸದಿಂದ ವಜಾ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

Edited By : Suman K
PublicNext

PublicNext

22/10/2024 05:31 pm

Cinque Terre

11.91 K

Cinque Terre

0

ಸಂಬಂಧಿತ ಸುದ್ದಿ