ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : 2009ರಲ್ಲಿ 4 ಲಕ್ಷ ಎಕರೆ ಇದ್ದ ವಕ್ಫ್ ಬೋರ್ಡ್ ಆಸ್ತಿ 10 ವರ್ಷದಲ್ಲಿ 9.5 ಲಕ್ಷ ಎಕರೆಗೆ ಏರಿಕೆ - ಸಂಸದ ರಾಘವೇಂದ್ರ ಮಾಹಿತಿ

ಶಿವಮೊಗ್ಗ : ದೇಶದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೇ ಇಲಾಖೆ ಬಿಟ್ಟರೆ ಮೂರನೇ ಅತಿದೊಡ್ಡ ಆಸ್ತಿ ಹೊಂದಿರುವ ಸಂಸ್ಥೆ ವಕ್ಫ್ ಬೋರ್ಡ್ ಆಗಿದೆ. 2009ರಲ್ಲಿ ಮಾಹಿತಿ ಪ್ರಕಾರ 4 ಲಕ್ಷ ಎಕರೆ ಇದ್ದ ವಕ್ಫ್ ಬೋರ್ಡ್ ಆಸ್ತಿ 10 ವರ್ಷದಲ್ಲಿ 9.5 ಲಕ್ಷ ಎಕರೆಗೆ ಏರಿಕೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದ್ದಾರೆ.

ಈ ವಿಷಯ ಸಂಸತ್ತಿನ ಕಳೆದ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಸುಮಾರು ಒಂದೂವರೆ ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಕ್ಫ್ ಹೊಂದಿದ್ದು, 2023ರಲ್ಲಿ 7.5 ಲಕ್ಷ ಇದ್ದ ವಕ್ಫ್ ಪ್ರಾಪರ್ಟಿಗಳು ಈಗ 8.70 ಲಕ್ಷಕ್ಕೆ ಏರಿದ್ದು, ಶೇ. 135 ರಷ್ಟು ಹೆಚ್ಚಳವಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಜಂಟಿ ಸಮಿತಿ ರಚನೆ ಮಾಡಿ ವಕ್ಪ್ ಆಸ್ತಿ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದ ತಕ್ಷಣ ಕರ್ನಾಟಕದಲ್ಲಿ 29 ಸಾವಿರ ಎಕರೆ ರೆವಿನ್ಯೂ ಭೂಮಿಯನ್ನು ವಕ್ಫ್ ಪ್ರಾಪರ್ಟಿಯಾಗಿ ಪರಿವರ್ತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಾಣಿಜ್ಯ ಆಸ್ತಿಗಳು ಕೂಡ ವಕ್ಫ್ ಹೆಸರಿಗೆ ಪರಿವರ್ತನೆಯಾಗಿದ್ದು, ಬಹುಪಾಲು ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿವೆ. ಒಂದೂವರೆ ಸಾವಿರ ವರ್ಷಗಳಷ್ಟು ಹಳೆಯ ದೇವಾಲಯ ಮತ್ತು ಅದರ ಸಾವಿರಾರು ಎಕರೆ ಆಸ್ತಿಯನ್ನಾಗಿ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನಕ್ಕೆ ಬೆಲೆ ಕೊಡದ ಇವರು ವಕ್ಪ್ ಟ್ರಿಬ್ಯುನಲ್ ಎಂದು ಮಾಡಿ ಸುಪ್ರೀಂ ಕೋರ್ಟ್ ನಲ್ಲಿಯೂ ಕೂಡ ಪ್ರಶ್ನಿಸದ ಹಾಗೆ ಮಾಡಿದ್ದಾರೆ ಎಂದು ರಾಘವೇಂದ್ರ ದೂರಿದ್ದಾರೆ.

ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ ಅವಶ್ಯಕ ಔಷಧಿಗಳಿಗೂ ಕೂಡ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಬಡ ರೋಗಿಗಳ ಪರಿಸ್ಥಿತಿ ಶೋಚನೀಯವಾಗಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿವಿಧ ಸುಳ್ಳು ಆರೋಪ ಹೊರಿಸಿ ತನಿಖೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

Edited By : Ashok M
PublicNext

PublicNext

20/11/2024 05:37 pm

Cinque Terre

20.68 K

Cinque Terre

0

ಸಂಬಂಧಿತ ಸುದ್ದಿ