ಸಾಗರ : ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವನ್ನು ಕರ್ನಾಟಕ ರಾಜ್ಯ ರೈತ ಸಂಘ ಚೂನಪ್ಪ ಪೂಜಾರಿ ಬಣದ ಜೊತೆ ವಿಲೀನಗೊಳಿಸುತ್ತಿದ್ದೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ರೈತ ಸಂಘಗಳು ಒಂದೇ ಸೂರಿನಡಿ ಬರಬೇಕು ಎನ್ನುವ ಹಿನ್ನೆಲೆಯಲ್ಲಿ ರೈತಸಂಘ ಏಕೀಕರಣ ಪ್ರಸ್ತಾಪಕ್ಕೆ ಮನ್ನಣೆ ನೀಡಿ ಡಾ. ಎಚ್.ಗಣಪತಿಯಪ್ಪ ಜಿಲ್ಲಾ ಮತ್ತು ತಾಲ್ಲೂಕು ಸಂಘವನ್ನು ವಿಲೀನಗೊಳಿಸಲಾಗುತ್ತಿದೆ ಎಂದರು.
ಡಿ. ೯ರಂದು ನಡೆಯುವ ಚಳಿಗಾಲದ ಅಧಿವೇಶದಲ್ಲಿ ರೈತಸಂಘ ಏಕೀಕರಣದ ವತಿಯಿಂದ 1ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆ ಮಾಡುವ ಉದ್ದೇಶ ಹೊಂದಲಾಗಿದ್ದು, ನಮ್ಮ ಜಿಲ್ಲೆಯಿಂದ ನೂರಾರು ರೈತರು ಪಾಲ್ಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾಗರ ತಾಲ್ಲೂಕಿನಲ್ಲಿರುವ ವಿವಿಧ ರೈತ ಸಂಘವನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
Kshetra Samachara
21/11/2024 02:39 pm