ಶಿವಮೊಗ್ಗ : ಬಡ ಕುಟುಂಬಗಳಿಗೆ ಇಲ್ಲಿನ ಯುವಕರು ದಾರಿದೀಪವಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಸಂಸ್ಥೆಯೊಂದರ ಸದಸ್ಯರು ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಖಾನ್ಕೇರಿ ಪ್ರದೇಶದಲ್ಲಿ ತನ್ನ ಸ್ವಂತ ಖಾಲಿ ಜಾಗ ಇದ್ದು ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದ ವಿಧವೆ ಹೆಣ್ಣುಮಗಳಿಗೆ ಆಸರೆ ನೀಡಿದ ಹೃದಯವಂತರು, ತಮ್ಮ ಸ್ವಂತ ಖರ್ಚಿನಿಂದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಶಿರಾಳಕೊಪ್ಪ ಪಟ್ಟಣದಲ್ಲಿ ಕಳೆದ 5 ವರ್ಷಗಳಿಂದ ಬಡವರ ಪರ, ನಿರ್ಗತಿಕರ ಪರ ಕೆಲಸ ಮಾಡುತ್ತಿರುವ ಈ ಯುವಕರ ತಂಡ, ಬಡ ರೋಗಿಗಳ ಚಿಕಿತ್ಸೆ, ರಂಜಾನ್ ಕಿಟ್, ಸೇರಿದಂತೆ ಅನೇಕ ಪುಣ್ಯ ಕಾರ್ಯಗಳು ಮಾಡಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದು ಸೂರಿಲ್ಲದ ಬಡವರಿಗೆ 5 ಮನೆಗಳನ್ನು ನಿರ್ಮಿಸಿಕೊಟ್ಟು ಇದೀಗ ಹೃದಯವಂತರು ಎನಿಸಿಕೊಂಡಿದ್ದಾರೆ.
ಸಾರ್ವಜನಿಕರ ದೇಣಿಗೆಗಳು ಮತ್ತು ಸಹಕಾರದೊಂದಿಗೆ ಅನೇಕ ಜನಪರ, ಬಡವರ ಪರ ಕೆಲಸಗಳು ಮಾಡುತ್ತಿರುವ ಈ ಯುವಕರ ತಂಡಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
PublicNext
21/11/2024 09:51 am