ಶಿವಮೊಗ್ಗ: ಸರ್ಕಾರಿ ಆಸ್ಪತ್ರೆ ಬಳಿ ನೀರಿನ ತೊಟ್ಟಿಯಲ್ಲಿ ಬಿದ್ದು ಮಗು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಶಿಕಾರಿಪುರ ಮತ್ತಿಕೋಟೆ ಗ್ರಾಮದ ಇಮ್ರಾನ್ ಪುತ್ರ ಐಯಾನ್ (3) ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟ ದುರ್ದೈವಿ ಮಗು.
ಸಂಬಂಧಿಕರ ಅರೋಗ್ಯ ವಿಚಾರಿಸಲು ಪೋಷಕರೊಂದಿಗೆ ಬಾಲಕ ಬಂದಿದ್ದು, ಆಟ ಆಡುತ್ತಾ ಹೊರಗೆ ಬಂದ ವೇಳೆ ಬಾಲಕ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ನೀರಿನ ತೊಟ್ಟಿಗೆ ಮುಚ್ಚದೆ ನಿರ್ಲಕ್ಷ್ಯ ತೋರಿದ್ದರಿಂದ ದುರಂತ ಸಂಭವಿಸಿದೆ. ಆಡಳಿತಧಿಕಾರಿ ಡಾ. ಶಿವಾನಂದ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿದ್ದಾರೆ.
PublicNext
16/11/2024 12:46 pm