ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅನಧಿಕೃತ ಜೆರಾಕ್ಸ್ ಸೆಂಟರ್‌ ಮೇಲೆ ತಹಶಿಲ್ದಾರ್ ದಾಳಿ - ಮಾಲೀಕ ಅರೆಸ್ಟ್

ಶಿವಮೊಗ್ಗ: ಜೆರಾಕ್ಸ್ ಸೆಂಟರ್‌ನಲ್ಲಿ ಅನಧಿಕೃತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳನ್ನು ನೀಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದಲ್ಲಿ ದಾಳಿ ನಡೆಸಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಾಲ್ಲೂಕು ದಂಡಾಧಿಕಾರಿ ರಶ್ಮಿ ಹಾಲೇಶ್ ಈ ದಾಳಿ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ನಗರ ಹೋಬಳಿಯಲ್ಲಿರುವ ಮಲ್ನಾಡ್ ಜೆರಾಕ್ಸ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ.

ನಗರ ಪಟ್ಟಣದಲ್ಲಿರುವ ಮಲ್ನಾಡ್ ಜೆರಾಕ್ಸ್ ಸೆಂಟರ್‌ನಲ್ಲಿರುವ ಕಂಪ್ಯೂಟರ್ ಪರಿಶೀಲಿಸಿರುವ ಅಧಿಕಾರಿಗಳಿಗೆ, ಇಲ್ಲಿ ಅಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್ ಇತರೆ ಸರ್ಕಾರಿ ಸೇವೆಗಳನ್ನ ಮಾಡಿಕೊಡುವುದು ದೃಢಪಟ್ಟಿದೆ. ಅಲ್ಲದೇ, ಗಣಕೀಕೃತದಲ್ಲಿ ಜನನ ಮರಣ ಪ್ರಮಾಣ ಪತ್ರಗಳನ್ನ ಸಹ ತಿದ್ದುಪಡಿ ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ.

ಇನ್ನು ಜೆರಾಕ್ಸ್ ಸೆಂಟರ್ ಮಾಲಿಕ ಇಸ್ಮಾಯಿಲ್ ವಿರುದ್ಧ ತಹಶೀಲ್ದಾರ್ ರಶ್ಮಿ ಹಾಲೇಶ್ ಪ್ರಕರಣ ದಾಖಲಿಸಿದ್ದು, ಈ ಅಕ್ರಮಕ್ಕೆ ಬಳಸುತಿದ್ದ ಕಂಪ್ಯೂಟರ್, ಬಯೋಮೆಟ್ರಿಕ್ ಯಂತ್ರ, ಸಿಸಿಟಿವಿ ಇನ್ನಿತರೇ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ

ಸ್ಥಳೀಯರು ಹೇಳುವ ಪ್ರಕಾರ ಇಸ್ಮಾಯಿಲ್ ಅನಧಿಕೃತವಾಗಿ ವಲಸೆ ಬಂದವರಿಗೆ ಆಧಾರ್ ಕಾರ್ಡ್ ಇನ್ನಿತರೇ ದಾಖಲಾತಿ ಮಾಡಿಕೊಡುತಿದ್ದ ಎನ್ನಲಾಗಿದೆ. ಇದು ದೇಶದ ಭದ್ರತೆಯ ವಿಷಯವಾಗಿದ್ದು, ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುತಿದ್ದ ಮಲ್ನಾಡ್ ಜೆರಾಕ್ಸ್ ಸೆಂಟರ್ ಮಾಲೀಕ ಇಸ್ಮಾಯಿಲ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

23/11/2024 01:07 pm

Cinque Terre

14.31 K

Cinque Terre

0

ಸಂಬಂಧಿತ ಸುದ್ದಿ