ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಜಾಗ ಅತಿಕ್ರಮಣ - ತೆರವಿಗೆ ಮನವಿ

ಸಾಗರ : ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿಗೆ ಸೇರಿದ ಅರಳೀಕೊಪ್ಪ ಗ್ರಾಮದ ಸರ್ವೆ ನಂ: 36 ರಲ್ಲಿ ವಸತಿ ಬಡಾವಣೆಯಲ್ಲಿನ ನಿವೇಶನ ನಂ: 21 ಮತ್ತು 22 ಇದು ಆಶ್ರಯ ನಿವೇಶನವಾಗಿದ್ದು, ಈ ನಿವೇಶನಗಳನ್ನು ಬೇರೆ ವ್ಯಕ್ತಿಯೊಬ್ಬ ಆಕ್ರಮವಾಗಿ ಖರೀದಿ ಮಾಡಿದ್ದಲ್ಲದೆ ಈಗ ಈ ನಿವೇಶನಕ್ಕೆ ಹೊಂದಿಕೊಂಡಿರುವ ಸರ್ಕಾರಿ ಖಾಲಿ ಜಾಗವನ್ನು ಒತ್ತುವರಿ ಮಾಡಿ ಕೌಪೌಂಡ್ ಹಾಕಿಕೊಂಡಿದ್ದಾರೆ.

ಸದರಿ ಜಾಗವನ್ನು ಆಶ್ರಯ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳು ತಮ್ಮ ಸಾರ್ವಜನಿಕ ಕಾರ್ಯಗಳಿಗೆ ಬಳಸುತ್ತಿದ್ದರು. ಈ ಭಾಗದಲ್ಲಿನ ನಿವಾಸಿಗಳಿಗೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಬೇರೆ ಯಾವುದೇ ಖಾಲಿ ಜಾಗ ಇರುವುದಿಲ್ಲ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿರುತ್ತದೆ.

ಕಾರಣ ತಾವು ಈ ಒತ್ತುವರಿ ಜಾಗದಲ್ಲಿ ನಿರ್ಮಿಸಿದ ಕಾಂಪೌಂಡ್ ಅನ್ನು ತೆರವುಗೊಳಿಸಿ ಆ ಜಾಗವನ್ನು ಸ್ಥಳೀಯ ನಿವಾಸಿಗಳ ಸಾರ್ವಜನಿಕ ಕೆಲಸಗಳಿಗೆ ಬಿಡಿಸಿಕೊಡಬೇಕೇಂದು ಅರಳೀಕೊಪ್ಪ ಗ್ರಾಮದ ಆಶ್ರಯ ಬಡಾವಣೆ ನಿವಾಸಿಗಳು ಉಪ ವಿಭಾಗಾಧಿಕಾರಿ ಯತೀಶ್ ಅವರಿಗೆ ಮನವಿ ಸಲ್ಲಿಸಿದರು.

Edited By : PublicNext Desk
PublicNext

PublicNext

21/11/2024 01:52 pm

Cinque Terre

7.65 K

Cinque Terre

0

ಸಂಬಂಧಿತ ಸುದ್ದಿ