ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಬಂದ ಹೊಸ ಸದಸ್ಯರು : ಪ್ರಾಣಿ ಪ್ರಿಯರಲ್ಲಿ ಸಂತಸ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಸದಸ್ಯರು ಆಗಮಿಸಿದ್ದಾರೆ. ಕೇರಳ ರಾಜ್ಯದ ತಿರುವನಂತಪುರದಿಂದ 5 ಬಗೆಯ ಹೊಸ ಪ್ರಾಣಿ, ಪಕ್ಷಿಗಳು ಬಂದಿಳಿದಿವೆ. ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಹೊಸ ಪ್ರಾಣಿ ಪಕ್ಷಿಗಳು ಮೃಗಾಲಯಕ್ಕೆ ಸೇರ್ಪಡೆಗೊಂಡಿದೆ. ಹೊಸ ಸದಸ್ಯರ ಆಗಮನದಿಂದಾಗಿ ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಪ್ರಾಣಿ ಪ್ರಭೇದಗಳ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಹೆಚ್ಚುವರಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮೋದನೆ ದೊರತಿತ್ತು. ಅದರಂತೆ, ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ತಿರುವನಂತಪುರ ಮೃಗಾಲಯಕ್ಕೆ ರವಾನಿಸಲಾಗಿದೆ.

ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಒಂದು ಗಂಡು, ಒಂದು ಹೆಣ್ಣು ಒಟ್ಟು 2 ಘಾರಿಯಲ್ ಮೊಸಳೆಗಳು, 2 ಗಂಡು, 2 ಹೆಣ್ಣು ಒಟ್ಟು 4 ಲೆಸ್ಸರ್ ರಿಹ ಪಕ್ಷಿಗಳು, ಒಂದು ಗಂಡು ಕತ್ತೆ ಕಿರುಬ, ಎರಡು ಮುಳ್ಳು ಹಂದಿ, ಮೂರು ಗಂಡು, ಮೂರುಹೆಣ್ಣು ಸನ್‌ಕನೂರು ಪಕ್ಷಿಗಳು ವಿನಿಮಯವಾಗಿವೆ.

ಇದರ ಜೊತೆಗೆ ತ್ಯಾವರೆಕೊಪ್ಪದಿಂದ ತಿರುವನಂತಪುರಕ್ಕೆ ಎರಡು ಮೊಸಳೆ, ಮೂರು ಹೆಣ್ಣು ಕತ್ತೆ ಕಿರುಬ, ಎರಡು ನರಿ, 2 ತಾಳೆಬೆಕ್ಕುಗಳು ರವಾನೆಯಾಗಿವೆ.

ಇನ್ನು ಘಾರಿಯಲ್ ಮೊಸಳೆ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದ್ದು, ಇವುಗಳ ಸಂರಕ್ಷಣೆ ಕುರಿತು ಪ್ರಕೃತಿ ಶಿಕ್ಷಣ ನೀಡಲು ತ್ಯಾವರೆಕೊಪ್ಪಕ್ಕೆ ತರಲಾಗಿದೆ. ದಕ್ಷಿಣ ಅಮೆರಿಕಕ್ಕೆ ಸಂಬಂಧಿಸಿದ ಲೆಸ್ಪೆರ್ ರಿಹಾ ಮತ್ತು ಸನ್ ಕಾನ್ನೂರ್ ಪ್ರಭೇದಗಳು ದಕ್ಷಿಣ ಅಮೆರಿಕಕ್ಕೆ ಸಂಬಂಧಿಸಿದವು. ಇವೆರಡು ಇದೇ ಮೊದಲು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಬಂದಿರುವುದು ಪ್ರಾಣಿ ಪ್ರಿಯರಲ್ಲಿ ಸಂತಸಕ್ಕೆ ಕಾರಣವಾಗಿವೆ.

Edited By : Manjunath H D
PublicNext

PublicNext

20/11/2024 08:57 am

Cinque Terre

29.2 K

Cinque Terre

0

ಸಂಬಂಧಿತ ಸುದ್ದಿ