ಶಿವಮೊಗ್ಗ : ನಗರದ ಎನ್.ಟಿ. ರಸ್ತೆಯ ವಾಹನ ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ವಾಹನ ಸುಟ್ಟು ಕರಕಲಾಗಿವೆ. ನಗರದ ನ್ಯೂ ಮಂಡ್ಲಿ ಬೈಪಾಸ್ ರಸ್ತೆಯಲ್ಲಿರುವ ಹೀರೋ ಕಂಪನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾದ ಕಾರ್ತಿಕ್ ಶೋರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಮುಂಜಾನೆ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಿಯರ ಸಮಯ ಪ್ರಜ್ಞೆಯಿಂದ ಬಹುದೊಡ್ಡ ಅವಘಢ ತಪ್ಪಿದೆ.
ಬೆಂಕಿ ಅವಘಢದಲ್ಲಿ 4-5 ಬೈಕ್ ಗಳು ಭಾಗಶಃ ಸುಟ್ಟು ಕರಕಲಾಗಿವೆ. ಕಚೇರಿ ಕೆಲ ಪೀಠೋಪಕರಣಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯಿಂದ ಹತೋಟಿಗೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಘಟನೆಗೆ ನಿಖರ ಕಾರಣಗಳು ತನಿಖೆ ಬಳಿಕ ತಿಳಿದು ಬರಬೇಕಿದೆ.
ಇನ್ನು ಶೋರೂಮ್ ಗೆ ಬೆಂಕಿ ಹತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳದಲ್ಲಿ ನೂರಾರು ಮಂದಿ ನಾಗರೀಕರು ಜಮಾವಣೆಗೊಂಡಿದ್ದರು. ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
PublicNext
21/10/2024 04:51 pm