ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ವಿವಾದಕ್ಕೆ ದಾರಿ ಮಾಡಿಕೊಡ್ತಾ ಸಾವರ್ಕರ್ ಸರ್ಕಲ್?

ಗದಗ: ವಿವಾದಗಳು ಹೆಚ್ಚಾದಂತೆಲ್ಲ ಸಾವರ್ಕರ್ ಹೆಸರು ಹೆಚ್ಚಾಗಿ ಪ್ರಚಲಿತವಾಗ್ತಿದೆ. ಅದೇ ರೀತಿ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ಸಾವರ್ಕರ್ ಸರ್ಕಲ್ ನಿರ್ಮಿಸಲು ಗ್ರಾಮದ ಕೆಲವರು ಮುಂದಾಗಿದ್ದಾರೆ. ಗ್ರಾಮದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ವೃತ್ತದಲ್ಲಿ‌ ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ಹಾಕದ್ದಾರೆ. ಇದಕ್ಕೆ ಸ್ಥಳೀಯ‌ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ತೆರವು ಗೊಳಿಸಲು ಅಧಿಕಾರಿಗಳಿಗೆ ಪಿನ್ ಮಾಡ್ತಿದ್ದಾರಂತೆ. ಇದರಿಂದ ಕೆಲಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಂಬಂಧಿಸಿದ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಮನವಿ ನೀಡಿದ್ದೆವೆ. ವೀರ ಸಾವರ್ಕರ್ ಜೀವನ ಚರಿತ್ರೆ ಬಗ್ಗೆ ಯುವ ಪೀಳಿಗೆಗೆ ಗೊತ್ತಾಗಬೇಕು. ಅವರ ಹೆಸರು ಅಜರಾಮರವಾಗಿ ಉಳಿಸಲು ಸಾವರ್ಕರ್ ಸರ್ಕಲ್ ನಿರ್ಮಿಸಲು ಮುಂದಾಗಿದ್ದೇವೆ. ಅಧಿಕಾರಿಗಳು ಪಂಚಾಯತ್‌ನಲ್ಲಿ ಠರಾವ್ ಪಾಸ್ ಮಾಡಿ, ಅನುಮತಿ ನೀಡಿ ಗ್ರಾ.ಪಂ ಅನುದಾನದಲ್ಲಿಯೇ ಪುತ್ಥಳಿ ನಿರ್ಮಿಸಬೇಕು ಅಂತಿದ್ದಾರೆ ಸ್ಥಳೀಯರು.

ಕಳೆದ ನಾಲ್ಕು ದಿನದ ಹಿಂದಷ್ಟೇ ಮನವಿ ನೀಡಿ ಇಂದು ಏಕಾಏಕಿ ಭಾವಚಿತ್ರ ಫಲಕ ಹಾಕಿದ್ದಾರೆ. ಇದು ಕೆಲವು ರಾಜಕೀಯ ವಿರೋಧಿಗಳ ಕಣ್ಣು ಕೆಂಪಾಗಿಸಿದೆ. ಇದರಲ್ಲಿ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ಸಾವರ್ಕರ್ ಫಲಕ ತೆರವಿಗಾಗಿ ಅಧಿಕಾರಿಗಳಿಗೆ ಒತ್ತಡ ಹಾಕ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ. ಹಾಗಾಗಿ ಗ್ರಾಮ ಪಂಚಾಯತ ಪಿಡಿಓ ಹಾಗೂ ಸಿಬ್ಬಂದಿಗಳು ಸಾವರ್ಕರ್ ಸಂಘಟನೆ ಯುವಕರಿಗೆ ತಿಳಿ ಹೇಳಲು ಮುಂದಾಗಿದ್ದಾರೆ. ಆಗ ಜನ ಜಮಾವಣೆ ಆಗತೊಡಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಎಂಟ್ರಿಯಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ‌ ಹೇಳೋದು ಹೀಗೆ.

ಒಟ್ನಲ್ಲಿ ಇಲ್ಲಿವರೆಗೆ ಸಿಟಿಗೆ ಮಾತ್ರ ಸೀಮಿತವಾಗಿದ್ದ ಸಾವರ್ಕರ್ ವಿವಾದ, ಈಗ ಹಳ್ಳಿವರೆಗೆ ಹರಡಿದೆ. ಅನುಮತಿ ಇಲ್ಲದೆ ಏಕಾಏಕಿ ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ಹಾಕಿರುವುರು ಕೆಲವರಿಗೆ ಕಸಿವಿಸಿ ಮೂಡಿಸಿದಂತಿದೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ‌ಮುಚ್ಚಿದ ಕೆಂಡದಂತಿದೆ.

Edited By : Manjunath H D
PublicNext

PublicNext

28/08/2022 11:13 am

Cinque Terre

39.01 K

Cinque Terre

7

ಸಂಬಂಧಿತ ಸುದ್ದಿ