ನವದೆಹಲಿ: ಬಿಜೆಪಿಯ ಸಂಸದೀಯ ಸಮಿತಿ ಅಷ್ಟೇ ಅಲ್ಲದೆ ಕೇಂದ್ರ ಚುನಾವಣಾ ಆಯೋಗದಿಂದ ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಅವರನ್ನು ಕೈಬಿಟ್ಟಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ, 'ಆರ್‌ಎಸ್‌ಎಸ್ ಮುಖಂಡರ ಒಪ್ಪಿಗೆ ಪಡೆದೇ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರ ಹಾಕಲಾಗಿದೆ' ಎಂದು ಬಿಜೆಪಿ ಮೂಲಗಳು ಬಹಿರಂಗಪಡಿಸಿದ್ದಾಗಿ ವರದಿಯಾಗಿದೆ.
ಬಾಪು ಅವರ ಕಾಲದಲ್ಲಿ ದೇಶಕ್ಕಾಗಿ, ಸಮಾಜಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ರಾಜಕಾರಣವನ್ನು ಮಾಡುತ್ತಿದ್ದರು. ಆದರೆ, ಈಗ ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಅಷ್ಟೇ ಅಲ್ಲದೆ ಅವರ ಹೇಳಿಕೆಗಳು ಭಾರಿ ಪರಿಣಾಮಕಾರಿಯಾಗಿರುತ್ತಿದ್ದವು. ಹೀಗಾಗಿ ಗಡ್ಕರಿ ಅವರಿಗೆ ಸಂಘ ಪರಿವಾರದ ಮುಖಂಡರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಇಂಥ ಹೇಳಿಕೆಗಳನ್ನು ವಿರೋಧ ಪಕ್ಷಗಳು, ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರಕ್ಕೆ ಮುಜುಗರ ತರಲು ಬಳಸಿಕೊಳ್ಳುತ್ತಿದ್ದವು ಎನ್ನುವುದು ಬಿಜೆಪಿಯ ವಾದವಾಗಿತ್ತು.
ಇಂಥ ಹೇಳಿಕೆ ನೀಡದಿರಲು ವಿಫಲವಾದ ಗಡ್ಕರಿಯವರ ವರ್ತನೆಯಿಂದ ಅಸಮಾಧಾನಗೊಂಡು, ಸಚಿವ ಪಟ್ಟ ಕಸಿದುಕೊಳ್ಳುವುದೂ ಸೇರಿದಂತೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೆಸ್ಸೆಸ್, ಬಿಜೆಪಿ ನಾಯಕತ್ವಕ್ಕೆ ಒಪ್ಪಿಗೆ ನೀಡಿತ್ತು ಎಂದು ಸಂಘ ಪರಿವಾರಕ್ಕೆ ನಿಕಟವಾಗಿರುವ ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.
PublicNext
25/08/2022 01:31 pm