ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಬಿಜೆಪಿ ಪಕ್ಷದಲ್ಲಿ ದಲಿತ ಸಿಎಂ ಕೂಗು ಇಲ್ಲ: ಸಚಿವ ಗೋವಿಂದ ಕಾರಜೋಳ

ಗುಬ್ಬಿ: ಬಿಜೆಪಿ ನಾಡಿಗೆ ಸಿಎಂ ಎಂಬುದನ್ನು ಬಯಸುತ್ತದೆ ಹೊರತು ಕೇವಲ ದಲಿತ ಸಿಎಂ ಆಗಬೇಕು ಎಂಬ ಭ್ರಮೆಯಲ್ಲಿ ಇಲ್ಲ. ಅದು ಕೇವಲ ಊಹಾಪೋಹದ ಮಾತುಗಳು ಅಷ್ಟೇ ಎಂದು ಬೃಹತ್ ನೀರಾವರಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಡಗೂರು ಗ್ರಾಮದ ಕೆರೆ ಕೊಡಿ ಹಾಗೂ ಇಡಕನಹಳ್ಳಿ 97ರ ನಾಲೆ ಕುಸಿತದ ವೀಕ್ಷಣೆ ಮಾಡಿ ಮಾತನಾಡಿ ಜಿಲ್ಲೆಯಲ್ಲಿ ಹಾನಿಯಾಗಿರುವ ಜಿಲ್ಲೆಯ ಕೆರೆ ಹಾಗೂ ನಾಳೆ ದುರಸ್ತಿ ಕರಣಕ್ಕೆ ಸುಮಾರು 80 ಕೋಟಿ ಅನುದಾನ ಬೇಕಾಗಿದ್ದು ಕೂಡಲೇ ಬಿಡುಗಡೆಗೊಳಿಸಿ ಕೆಲಸ ಮಾಡಿಸಲಾಗುತ್ತದೆ.

ಗುಬ್ಬಿ ತಾಲ್ಲೂಕಿನ ಇಡಕನಹಳ್ಳಿ ಹೇಮಾವತಿ ನಾಲೆಯ 97 ಕಿ.ಮೀ ಭಾಗದಲ್ಲಿ ನಾಲೆ ಕುಸಿದಿದ್ದು ಅಂದಾಜು 25 ಕೋಟಿ ಹಣದಲ್ಲಿ ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು. ದಾವಣಗೆರೆಯಲ್ಲಿ ಸಿದ್ದರಾಮ ಉತ್ಸವ ನಡೆದ ನಂತರ ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿದ್ದು ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ ಕಾಂಗ್ರೆಸ್‌ನವರ ಅಧಿಕಾರದ ಕಿತ್ತಾಟದಿಂದ ಇಡೀ ಪಕ್ಷವೇ ದೇಶದಲ್ಲಿ ಅವನತಿಯತ್ತ ಸಾಗುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಅಶಾಂತಿಯನ್ನು ಸೃಷ್ಟಿಸಿ ಸಮಾಜದ ಅಭಿವೃದ್ಧಿಗಿಂತ ಅವರಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಸಂಸದ ಜಿ. ಎಸ್ ಬಸವರಾಜು, ಮುಖಂಡರಾದ ಎನ್.ಸಿ ಪ್ರಕಾಶ್, ಎಸ್ಪಿ ದಿಲೀಪ್ ಕುಮಾರ್ ಚಂದ್ರಶೇಖರ ಬಾಬು, ಹಿತೇಶ್, ಕಾವೇರಿ ನೀರಾವರಿ ನಿಗಮದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ವರದಿ ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

20/08/2022 10:48 pm

Cinque Terre

55.68 K

Cinque Terre

3

ಸಂಬಂಧಿತ ಸುದ್ದಿ